ADVERTISEMENT

ಶೀರೂರು ಪರ್ಯಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್– ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:24 IST
Last Updated 4 ಜನವರಿ 2026, 20:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಾರ್ಕಳ (ಉಡುಪಿ): ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಹೊರೆಕಾಣಿಕೆ ಸಲ್ಲಿಸಲು ರಚಿಸಿರುವ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಸಂಬಂಧ ನಿಟ್ಟೆಯ ಸುದೀಪ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. 

‘ಸೌಹಾರ್ದ ಸಮಿತಿಯವರು ಹಿಂದೂಗಳ ಪರ್ಯಾಯ ಮೆರವಣಿಗೆಯಲ್ಲಿ ‘ದಫ್‌’ನಂಥ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿಲ್ಲ. ಅಷ್ಟೊಂದು ಸೌಹಾರ್ದ ಇದ್ದಲ್ಲಿ ಲವ್ ಜಿಹಾದ್, ಗೋ ಹತ್ಯೆ, ಭಯೋತ್ಪಾದನೆ, ಹಿಂದೂಗಳ ಮೇಲಿನ ದಾಳಿ ತಡೆದು ಸಾಮರಸ್ಯ ಕಾಪಾಡಲಿ’ ಎಂದು ಸುದೀಪ್‌ ಶೆಟ್ಟಿ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ ಎಂದು ಕಾರ್ಕಳ ಗ್ರಾಮೀಣ ಠಾಣೆಗೆ ದೂರು ನೀಡಲಾಗಿತ್ತು.  

ADVERTISEMENT

ಸುದೀಪ್‌ ಶೆಟ್ಟಿಯು ಸಮುದಾಯಗಳ ಮಧ್ಯೆ ದ್ವೇಷ ಉತ್ತೇಜಿಸುವ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವ ಪೋಸ್ಟ್‌ ಮಾಡಿದ್ದಾರೆ ಎಮದು ರುದ್ರೇಶ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.