ADVERTISEMENT

ಮಳೆ ಬಿರುಸು: ಬಿರುಗಾಳಿಗೆ ಹಲವು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 11:56 IST
Last Updated 8 ಸೆಪ್ಟೆಂಬರ್ 2019, 11:56 IST
ಹೆಬ್ರಿಯ ಬೇಳಂಜೆ ಬಳಿ ಗಣೇಶ ಉತ್ಸವಕ್ಕೆ ಹಾಕಿದ್ದ ಶೆಡ್‌ ಗಾಳಿಗೆ ಹಾರಿ ಹೋಗಿರುವುದು
ಹೆಬ್ರಿಯ ಬೇಳಂಜೆ ಬಳಿ ಗಣೇಶ ಉತ್ಸವಕ್ಕೆ ಹಾಕಿದ್ದ ಶೆಡ್‌ ಗಾಳಿಗೆ ಹಾರಿ ಹೋಗಿರುವುದು   

ಉಡುಪಿ: ಜಿಲ್ಲೆಯಾದ್ಯಂತ ಭಾನುವಾರ ಬಿರುಸಿನ ಮಳೆಯಾಗಿದೆ. ಹೆಬ್ರಿಯಲ್ಲಿ ಬೆಳಿಗ್ಗೆ ಬೀಸಿದ ಸುಂಟರಗಾಳಿಗೆ ಹಲವು ಮನೆಗಳ ಹೆಂಚು, ಶೀಟುಗಳು ಹಾರಿಹೋಗಿವೆ. ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

ಸಿದ್ದಾಪುರದ ಹೊಸಂಗಡಿ ಸರ್ಕಲ್‌ ಬಳಿ ಕಲ್ಲುಗುಡ್ಡೆ ಚಂದ್ರಶೆಟ್ಟಿ ಅವರ ಕಿರಾಣಿ ಅಂಗಡಿ ಚಾವಣಿ ಕುಸಿದು ಬಿದ್ದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 4.1 ಸೆ.ಮೀ ಮಳೆಯಾಗಿದೆ. ಉಡುಪಿಯಲ್ಲಿ ಹೆಚ್ಚು 7.5, ಕಾರ್ಕಳದಲ್ಲಿ ಕಡಿಮೆ 3.4, ಕುಂದಾಪುರದಲ್ಲಿ 5.6 ಸೆ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT