ADVERTISEMENT

ಶಿರ್ವ | ಕಳವು ಪ್ರಕರಣ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:47 IST
Last Updated 16 ಅಕ್ಟೋಬರ್ 2025, 4:47 IST
ರಶೀದ್ ಮೊಯಿದ್ದೀನ್
ರಶೀದ್ ಮೊಯಿದ್ದೀನ್   

ಶಿರ್ವ: ಕಾಪು ತಾಲ್ಲೂಕು ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ಲೂಯಿಸ್ ಮಥಾಯಿಸ್ ಎಂಬುವರ ಮನೆ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಕಾಯಾಚರಣೆ ನಡೆಸಿ ಬೈಂದೂರು ಶಿರೂರು ಗ್ರಾಮದ ಆಲಂದೂರು ರಶೀದ್ ಮೊಯಿದ್ದೀನ್ (40) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ವಿವಿಧ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ಟೋಬರ್‌ 3 ಮತ್ತು 6ರ ನಡುವೆ ಕಳವು ಮಾಡಿಕೊಂಡು ಹೋಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಅ. 10ರಂದು ಪ್ರಕರಣ ದಾಖಲಾಗಿತ್ತು.

ರಶೀದ್ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್, ಪಂಜಿಮಾರ್, ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲೂರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್‌ಬೇಲ್ತೂರು ಎಂಬಲ್ಲಿ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ. 300 ಕಬ್ಬಿಣದ ಶೀಟ್‌ಗಳು, ಕೃತ್ಯಕ್ಕೆ ಬಳಸಿದ ಮಹಿಂದ್ರ ಸುಪ್ರೊ ವಾಹನ ಸೇರಿ ₹5.50 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಆರೋಪಿ ರಶೀದ್ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.