ADVERTISEMENT

ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ: ಬ್ರಹ್ಮಕಲಶೋತ್ಸವ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:55 IST
Last Updated 12 ಜನವರಿ 2026, 6:55 IST
ಸಾಂತೂರು ಸುಬ್ರಹ್ಮಣ್ಯ ದೇವರು
ಸಾಂತೂರು ಸುಬ್ರಹ್ಮಣ್ಯ ದೇವರು   

ಪಡುಬಿದ್ರಿ: ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರುಗಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಪ್ರಧಾನ ಅರ್ಚಕ ವಿಠಲ ಜೋಯಿಸ ನೇತೃತ್ವದಲ್ಲಿ  ನಡೆಯಿತು.

ಅರ್ಚಕರು, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಗುರುರಾಜ ಪ್ರಭು, ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ನೂತನ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸಾಂತೂರು ಸಾಮನಾಡಿಗುತ್ತು ದಿವಾಕರ ಎಂ. ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷರಾಗಿ ಸಾಂತೂರು ನಡಿಮನೆ ಚಂದ್ರಶೇಖರ ಶೆಟ್ಟಿ ಆಯ್ಕೆಯಾದರು.

ADVERTISEMENT

ಪದಾಧಿಕಾರಿಗಳು: ಉಪಾಧ್ಯಕ್ಷರು– ಪದ್ಮನಾಭ ತಂತ್ರಿ, ಶ್ರೀನಿವಾಸ ಜೋಯಿಸ, ದಯಾನಂದ ಶೆಟ್ಟಿ, ಶಿವರಾಮ ಶೆಟ್ಟಿ, ಪ್ರಸಾದ್ ಎಂ. ಶೆಟ್ಟಿ, ರಾಜಶೇಖರ ಕೋಟ್ಯಾನ್, ಗೌರವ ಸಲಹೆಗಾರರು– ಗೋಪಾಲಕೃಷ್ಣ ತಂತ್ರಿ, ಡಾ.ಗುರುರಾಜ ಜೋಯಿಸ, ಡಾ.ಸುಧಾಕರ ಶೆಟ್ಟಿ, ಶಶಿಧರ ಭಾಸ್ಕರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಚಂದ್ರಶೇಖರ ರಾವ್, ಕಾರ್ಯದರ್ಶಿಗಳು– ಬಾಲಚಂದ್ರ ಜೋಯಿಸ, ಗಣೇಶ್ ಶೆಟ್ಟಿ, ಹರಿಣಾಕ್ಷ ಶೆಟ್ಟಿ, ಸುಜಿತ್ ಕೆ. ಶೆಟ್ಟಿ, ರವೀಂದ್ರ ಪ್ರಭು, ಶುಭಕರ ಪೂಜಾರಿ, ಜತೆ ಕಾರ್ಯದರ್ಶಿಗಳು– ರಘುಪತಿ ಜೋಯಿಸ, ಹರಿಕೃಷ್ಣ ತಂತ್ರಿ, ಲಕ್ಷ್ಮೀನಾರಾಯಣ ಜೋಯಿಸ, ಬಾಲಚಂದ್ರ ಶೆಟ್ಟಿ, ಸುನಿಲ್ ರಾಜ್ ಶೆಟ್ಟಿ, ಜಯರಾಮ ಶೆಟ್ಟಿ, ನಿತಿನ್ ಬಿ. ಶೆಟ್ಟಿ ಶರತ್ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಯುಗಾನಂದ ಶೆಟ್ಟಿ, ಅರುಣ್ ಶೆಟ್ಟಿ, ಸತೀಶ್ ಶೆಟ್ಟಿ, ರಾಜೇಶ್ ಮೂಲ್ಯ, ಅಶೋಕ್ ನಾಯಕ್, ಸೋಮನಾಥ ಸುವರ್ಣ, ಸುಧಾಕರ ಶೆಣೈ, ಕೋಶಾಧಿಕಾರಿ– ಸುಬ್ರಹ್ಮಣ್ಯ ಭಟ್.

ಶ್ರೀನಿವಾಸ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ಮಾಹಿತಿ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ರಾವ್ ವಂದಿಸಿದರು.