ADVERTISEMENT

ಶಿರ್ವ: ಕುತ್ಯಾರು ಗುತ್ತುಬೈಲಿನಲ್ಲಿ ‘ಕಮಲ ಕೃಷಿ ಕೂಟ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:00 IST
Last Updated 10 ಜುಲೈ 2025, 4:00 IST
ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶಿರ್ವ ಸಮೀಪದ ಕುತ್ಯಾರು ಗುತ್ತುಬೈಲಿನಲ್ಲಿ ನಡೆದ ಕಮಲ ಕೃಷಿ ಕೂಟವನ್ನು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ಗದ್ದೆಗೆ ಹಾಲು ಎರೆಯುವುದರ ಮೂಲಕ ಉದ್ಘಾಟಿಸಿದರು
ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶಿರ್ವ ಸಮೀಪದ ಕುತ್ಯಾರು ಗುತ್ತುಬೈಲಿನಲ್ಲಿ ನಡೆದ ಕಮಲ ಕೃಷಿ ಕೂಟವನ್ನು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ಗದ್ದೆಗೆ ಹಾಲು ಎರೆಯುವುದರ ಮೂಲಕ ಉದ್ಘಾಟಿಸಿದರು   

ಶಿರ್ವ: ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶಿರ್ವ ಸಮೀಪದ ಕುತ್ಯಾರು ಗುತ್ತುಬೈಲಿನಲ್ಲಿ ನಡೆದ ಕಮಲ ಕೃಷಿ ಕೂಟವನ್ನು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ಗದ್ದೆಗೆ ಹಾಲು ಎರೆಯುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಕೃಷಿ ನಂಬಿದವರಿಗೆ ಎಂದೂ ಬರಗಾಲ ಬರುವುದಿಲ್ಲ. ಇಂದಿನ ದಿನಗಳಲ್ಲಿ ಭತ್ತದ ಕೃಷಿ ಮಾಡುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಕೃಷಿ ಪರಂಪರೆಯನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ’ ಎಂದರು.

ಹಿರಿಯ ನಾಟಿ ಕಾರ್ಯಕರ್ತರಾದ ಗುಲಾಬಿ ಪೂಜಾರಿ, ಸುನಂದ ಶೆಟ್ಟಿ ಅವರನ್ನು ಶಾಸಕರು ಸನ್ಮಾನಿಸಿದರು.

ADVERTISEMENT

ಸಮಾರೋಪದಲ್ಲಿ ಭಾಗವಹಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಗತಿಪರ ಕೃಷಿಕರಾದ ಪೂವಣಿ ಪೂಜಾರಿ, ಕುಟ್ಟಿ ಪೂಜಾರಿ ಮಂಡ್ಜ, ಕರಿಯ ಶೆಟ್ಟಿ ತೋಟದಮನೆ ಅವರನ್ನು ಸನ್ಮಾನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್, ಉಪಾಧ್ಯಕ್ಷೆ ಸುಮಾ ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನೀತಾ ಗುರುರಾಜ್, ಸುರೇಶ್ ಶೆಟ್ಟಿ ಕಾಡೂರು, ಸ್ಥಳೀಯರಾದ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಜಗದೀಶ್ ಅರಸ್ ಇದ್ದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಶ್ರೀಕಾಂತ್ ನಾಯಕ್ ಅಲೆವೂರು ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರೇಶ್ಮಾ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಬಳ್ಕೂರು ಸದಾನಂದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.