
ಸಾಲಿಗ್ರಾಮ(ಬ್ರಹ್ಮಾವರ): ‘ಸಂಘಟನೆಗಳು ಸಮಾಜ ಹಾಗೂ ಸಮುದಾಯದ ಆಸ್ತಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಯುವ ವೇದಿಕೆಯ ಒಂಬತ್ತು ವರ್ಷಗಳ ಸಾಮಾಜಿಕ ಕಾರ್ಯಗಳೇ ಸಾಕ್ಷಿ’ ಎಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಹೇಳಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ವೇದಿಕೆಯ ಅಧ್ಯಕ್ಷ ಗಿರೀಶ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ ಶುಭ ಹಾರೈಸಿದರು.
ಇದೇ ಸಂದರ್ಭ ಐಕಳ ಪೊಂಪೈ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ಜಗದೀಶ ಹೊಳ್ಳ, ಸಮಾಜಸೇವಕ ಬಿ. ಸುರೇಶ ಅಡಿಗ ಬಾಳ್ಳುದ್ರು ಅವರನ್ನು ಸನ್ಮಾನಿಸಲಾಯಿತು. ಡಾ. ಬಾಲಕೃಷ್ಣ ನಕ್ಷತ್ರಿ ಹಾಗೂ ಪಿ. ಸದಾಶಿವ ಮಧ್ಯಸ್ಥ ಅವರ ವತಿಯಿಂದ ವಿದ್ಯಾ ನಿಧಿಯನ್ನು ಆಯ್ದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಬೆಂಗಳೂರಿನ ಶೇಖರ್ ಆಸ್ಪತ್ರೆಯ ಮುಖ್ಯಸ್ಥ ಡಾ. ಪಿ. ವಿಷ್ಣುಮೂರ್ತಿ ಐತಾಳ, ಅಘೋರೇಶ್ವರ ದೇವಸ್ಥಾನದ ಧರ್ಮದರ್ಶಿ ಚಂದ್ರಶೇಖರ ಕಾರಂತ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿಯ ಸದಸ್ಯ ರಾಜೇಶ ಕಾರಂತ, ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಕೂಟ ಮಹಾಜಗತ್ತು ಅಂಗಸಂಸ್ಥೆಯ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ, ಕೃಷಿಕ ಪಿ. ರಘು ಮಧ್ಯಸ್ಥ ಪಾರಂಪಳ್ಳಿ, ಯುವ ವೇದಿಕೆಯ ಗೌರವ ಸಲಹೆಗಾರ ಕೆ. ತಾರಾನಾಥ ಹೊಳ್ಳ, ಸಂಸ್ಥೆಯ ಮಾರ್ಗದರ್ಶಕ ಪಿ. ಮಂಜುನಾಥ ಉಪಾಧ್ಯ, ಕೂಟ ಮಹಾಜಗತ್ತು ಕೇಂದ್ರೀಯ ವಲಯ 1ರ ಸಂಘಟನಾ ಕಾರ್ಯದರ್ಶಿ ಶ್ರೀಪತಿ ಅಧಿಕಾರಿ, ಯುವ ವೇದಿಕೆಯ ನಿಯೋಜಿತ ಅಧ್ಯಕ್ಷ ಪಿ. ಸಚಿನ್ ಹೇರ್ಳೆ, ಕೋಶಾಧಿಕಾರಿ ರವಿರಾಜ ಉಪಾಧ್ಯ ಇದ್ದರು.
ಯುವ ವೇದಿಕೆಯ ಗೌರವಾಧ್ಯಕ್ಷ ಪಿ.ವೈ. ಕೃಷ್ಣಪ್ರಸಾದ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ವೇದಿಕೆಯ ಕಾರ್ಯದರ್ಶಿ ಶ್ರೀಕಾಂತ ಐತಾಳ ವರದಿ ವಾಚಿಸಿದರು. ಗೌರವ ಸಲಹೆಗಾರ ಕೆ. ಶಶಿಧರ ಮಯ್ಯ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಸುಧೀಂದ್ರ ಐತಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.