
ಬೈಂದೂರು: ಸುರಭಿ ರಿ. ಬೈಂದೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ ಯಡ್ತರೆ ಜೆ.ಎನ್.ಆರ್ ಕಲಾಮಂದಿರದ ಹೊರಾಂಗಣ ವೇದಿಕೆಯಲ್ಲಿ ಡಿ. 14ರಿಂದ 21ರವರೆಗೆ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಉತ್ತಮ ನಾಟಕ: ಶಿವೋಹಂ ತಂಡ: ಕ್ರಾನಿಕಲ್ ಆಫ್ ಇಂಡಿಯಾ ರಿ. ಬೆಂಗಳೂರು (ಪ್ರಥಮ), ಈದಿ ತಂಡ: ಸುಮನಸ ಕೊಡವೂರು ಉಡುಪಿ (ದ್ವಿತೀಯ), ಪ್ರಾಣ ಪದ್ಮನಿ ತಂಡ: ಸ್ಪಂದನ ರಿ. ಸಾಗರ (ತೃತೀಯ).
ಶ್ರೇಷ್ಠ ನಿರ್ದೇಶನ: ಈದಿ (ವಿದ್ದು ಉಚ್ಚಿಲ) ಪ್ರಥಮ, ಶಿವೋಹಂ (ಗಣೇಶ ಮಂದಾರ್ತಿ) ದ್ವಿತೀಯ, ಪ್ರಾಣ ಪದ್ಮಿನಿ (ಮಂಜುನಾಥ ಎಲ್. ಬಡಿಗೇರ್) ತೃತೀಯ ಸ್ಥಾನ ಗಳಿಸಿದೆ.
ಶ್ರೇಷ್ಠ ರಂಗ ಬೆಳಕು: ಶಿವೋಹಂ (ಪ್ರಥ್ವಿನ್ ಉಡುಪಿ) ಪ್ರಥಮ, ಈದಿ (ಪ್ರವೀಣ ಜಿ. ಕೊಡವೂರು) ದ್ವಿತೀಯ, ಮಾರಿಕಾಡು( ಮೈಕೋ ಶಿವಶಂಕರ) ತೃತೀಯ.
ಶ್ರೇಷ್ಠ ರಂಗ ಪರಿಕರ: ಮಾರಿಕಾಡು (ಛಾಯಾ ಭಾರ್ಗವಿ) ಪ್ರಥಮ, ಶಿವೋಹಂ (ಗಣೇಶ ಮಂದಾರ್ತಿ) ದ್ವಿತೀಯ, ಪ್ರಾಣ ಪದ್ಮಿನಿ (ಗುರುಮೂರ್ತಿ ವರದಾಮೂಲ) ತೃತೀಯ.
ಶ್ರೇಷ್ಠ ಪ್ರಸಾದನ: ಮಾರಿಕಾಡು (ಮಾಲತೇಶ ಬಡಿಗೇರ) ಪ್ರಥಮ, ಪ್ರಾಣ ಪದ್ಮಿನಿ (ಗುರುಮೂರ್ತಿ ವರದಾಮೂಲ) ದ್ವಿತೀಯ, ಶಿವೋಹಂ (ರಾಘವೇಂದ್ರ ಪ್ರಸಾದ) ತೃತೀಯ.
ಶ್ರೇಷ್ಠ ಸಂಗೀತ: ಶಿವೋಹಂ (ಗಣೇಶ ಮಂದಾರ್ತಿ) ಪ್ರಥಮ, ಪ್ರಾಣ ಪದ್ಮಿನಿ (ಭಾರ್ಗವ ಹೆಗ್ಗೋಡು) ದ್ವಿತೀಯ, ಈದಿ (ಶೋಧನ ಎರ್ಮಾಳ್) ತೃತೀಯ.
ಶ್ರೇಷ್ಠ ನಟ: ಚನಿಯ ಹಾಗೂ ದೈವ ಪಾತ್ರದಾರಿ ಮಂಜು ಕಾಸರಗೋಡು (ಶಿವೋಹಂ) ಪ್ರಥಮ, ಶಾಂತ ಮೂರ್ತಿ ಭಟ್ ಪಾತ್ರದಾರಿ ರಾಜೇಂದ್ರ ಕಾರಂತ (ಮಗಳೆಂಬ ಮಲ್ಲಿಗೆ) ದ್ವಿತೀಯ, ಸಂಕ್ರಣ್ಣ ಪಾತ್ರದಾರಿ ಹರಿ ಸಮಷ್ಠಿ ಹಾಗೂ ಅಜ್ಜ ಪಾತ್ರದಾರಿ ಶ್ರೀನಾಥ (ಮಗಳೆಂಬ ಮಲ್ಲಿಗೆ) ತೃತೀಯ.
ಶ್ರೇಷ್ಠ ನಟಿ: ರೋಶನಿ ಪಾತ್ರದಾರಿಣಿ ದೃತಿ ಸಂತೋಷ (ಈದಿ) ಪ್ರಥಮ, ಝರೀನಾ ಪಾತ್ರದಾರಿಣಿ ಪ್ರಜ್ಞಾಶ್ರೀ (ಈದಿ) ದ್ವಿತೀಯ, ಪದ್ಮಿನಿ ಪಾತ್ರದಾರಿಣಿ ಭೂಮಿ (ಪ್ರಾಣ ಪದ್ಮಿನಿ) ತೃತೀಯ ಸ್ಥಾನ ಗಳಿಸಿದ್ದಾರೆ.
ನಿರ್ಣಾಯಕರಾಗಿ ಸಿದ್ದರಾಜು ದಾವಣಗೆರೆ, ಕೃಷ್ಣಕುಮಾರ್ ನಾರ್ಣಕಜೆ ಮೈಸೂರು, ರೇವತಿ ರಾಮ್ ಕುಂದನಾಡು ಕೊಪ್ಪಳ ಹಾಗೂ ಸತ್ಯನಾ ಕೊಡೇರಿ ಸಹಕರಿಸಿದ್ದರು. ವಿಜೇತರಿಗೆ ಜ. 17ರಂದು ಬೈಂದೂರು ಶ್ರೀಶಾರದಾ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವುದು. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಕ್ರಾನಿಕಲ್ ಆಫ್ ಇಂಡಿಯಾ ರಿ. ಬೆಂಗಳೂರು ತಂಡದ ಶಿವೋಹಂ ನಾಟಕದ ಮರು ಪ್ರದರ್ಶನ ಇರುವುದು ಎಂದು ಸುರಭಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.