ADVERTISEMENT

ಉಡುಪಿ: ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 13:38 IST
Last Updated 14 ಜನವರಿ 2021, 13:38 IST
ಮಕರ ಸಂಕ್ರಾಂತಿಯ ದಿನವಾದ ಗುರುವಾರ ಕೃಷ್ಣಮಠದಲ್ಲಿ ಅಷ್ಠಮಠಗಳ ಯತಿಗಳು ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಿಸಿದರು.
ಮಕರ ಸಂಕ್ರಾಂತಿಯ ದಿನವಾದ ಗುರುವಾರ ಕೃಷ್ಣಮಠದಲ್ಲಿ ಅಷ್ಠಮಠಗಳ ಯತಿಗಳು ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಿಸಿದರು.   

ಉಡುಪಿ: ಆಚಾರ್ಯ ಮಧ್ವರು ಉಡುಪಿಯಲ್ಲಿ ಕಡೆಗೋಲು ಕೃಷ್ಣನನ್ನು ಪ್ರತಿಷ್ಠಾಪಿಸಿದ ಪರ್ವ ದಿನವಾದ ಮಕರ ಸಂಕ್ರಾಂತಿಯಂದು ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಿಸಲಾಯಿತು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಗಳ ಸಂಕಲ್ಪದಂತೆ ₹ 50 ಲಕ್ಷ ವೆಚ್ಚದಲ್ಲಿ 2.5 ಕೆ.ಜಿ ಚಿನ್ನವನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಸ್ವರ್ಣ ಛತ್ರವನ್ನು ಬೆಳಿಗ್ಗೆ ಕೃಷ್ಣನಿಗೆ ಸಮರ್ಪಣೆ ಮಾಡಲಾಯಿತು.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.