ADVERTISEMENT

ಸಾರಿಗೆ ನೌಕರರ ಮುಷ್ಕರ: ದೀಡು ನಮಸ್ಕಾರ

ಸೋಮವಾರ ಖಾಸಗಿ ಬಸ್‌ ಬಂದ್ ಇಲ್ಲ: ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್‌ ನಾಯಕ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 16:43 IST
Last Updated 13 ಡಿಸೆಂಬರ್ 2020, 16:43 IST
ಕುಯಿಲಾಡಿ ಸುರೇಶ್‌ ನಾಯಕ್‌
ಕುಯಿಲಾಡಿ ಸುರೇಶ್‌ ನಾಯಕ್‌   

ಉಡುಪಿ:ರಾಜ್ಯದಲ್ಲಿ ಸೋಮವಾರಖಾಸಗಿ ಬಸ್‌ಗಳ ಬಂದ್ ಇಲ್ಲ.ರಾಜ್ಯಖಾಸಗಿ ಬಸ್‌ಮಾಲೀಕರಒಕ್ಕೂಟಬಂದ್‌ಗೆಕರೆನೀಡಿಲ್ಲ ಎಂದು ಒಕ್ಕೂಟದ ರಾಜ್ಯ ಖಜಾಂಚಿ ಕುಯಿಲಾಡಿ ಸುರೇಶ್‌ ನಾಯಕ್ ತಿಳಿಸಿದ್ದಾರೆ.

ಕಳೆದಮೂರುದಿನಗಳಿಂದ4ಸಾರಿಗೆನಿಗಮಗಳನೌಕರರುಪ್ರತಿಭಟನೆನಡೆಸುತ್ತಿದ್ದಾರೆ.ಸರ್ಕಾರಹಂತಹಂತವಾಗಿಬೇಡಿಕೆಈಡೇರಿಸುವವಿಶ್ವಾಸವಿದೆ. ಸರ್ಕಾರಕ್ಕೆ ಬೆಂಬಲವಾಗಿ ಖಾಸಗಿ ಬಸ್‌ಗಳು ನಿಂತಿದ್ದು, 8,500ಕ್ಕೂ ಹೆಚ್ಚುಬಸ್‌ಗಳು ಓಡಾಡಲಿವೆ.ಬಂದ್‌ಮಾಡುವುದಾಗಿಹೇಳಿರುವ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಪ್ರಯಾಣಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ದೀಡು ನಮಸ್ಕಾರ:ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನೌಕರ ನಾಗೇಶ್‌ ಭೋವಿ ಎಂಬುವರು ದೀಡು ನಮಸ್ಕಾರ ಹಾಕುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ADVERTISEMENT

ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ ತಲೆಯ ಮೇಲೆ ನೀರು ಸುರಿದುಕೊಂಡು ಬಸ್‌ ನಿಲ್ದಾಣದಿಂದ ಕೃಷ್ಣಮಠದವರೆಗೆ ನಾಗೇಶ್‌ ದೀಡು ನಮಸ್ಕಾರ ಹಾಕಿದರು. ಮತ್ತೊಂದೆಡೆ, ಭಾನುವಾರವೂ ಜಿಲ್ಲೆಯೊಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇತ್ತು. ಹೊರ ಜಿಲ್ಲೆಗಳಿಂದ ಉಡುಪಿಗೆ ಬಸ್‌ಗಳು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.