ADVERTISEMENT

ಉಡುಪಿ ಉಚ್ಚಿಲ ದಸರಾ: ಮುದ್ದು ಶಾರದೆಯರ ಕಲರವ

ಛದ್ಮವೇಷ ಸ್ಪರ್ಧೆಯಲ್ಲಿ ರಾಜ್ಯದ ನೂರಾರು ಸ್ಪರ್ಧಿಗಳು ಭಾಗಿ, ಸಚಿವ ಮುನಿಯಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:53 IST
Last Updated 27 ಸೆಪ್ಟೆಂಬರ್ 2025, 2:53 IST
ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಮಕ್ಕಳಿಗಾಗಿ ನಡೆದ ಮುದ್ದು ಶಾರದೆ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು
ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಮಕ್ಕಳಿಗಾಗಿ ನಡೆದ ಮುದ್ದು ಶಾರದೆ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು   

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ 2025ರ 5ನೇ ದಿನವಾದ ಶುಕ್ರವಾರ ಮಕ್ಕಳಿಗಾಗಿ ನಡೆದ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ‘ಮುದ್ದು ಶಾರದೆ’ಯರ ಕಲರವ ಎದ್ದು ಕಾಣುತ್ತಿತ್ತು.

3 ವರ್ಷದಿಂದ 9 ವರ್ಷ ವಯಸ್ಸಿನ ಮಕ್ಕಳಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಮುದ್ದು ಶಾರದೆಯರನ್ನು ಕಣ್ತುಂಬಿಕೊಳ್ಳಲು ಹೆತ್ತವರ ಜೊತೆಗೆ ಸಾರ್ವಜನಿಕರು ಕಾತುರರಾಗಿದ್ದರು. ಅನ್ವಿ ನಾಯಕ್ ಬ್ರಹ್ಮಾವರ ಪ್ರಥಮ, ವಿಶಾ ಎಸ್. ಪೂಜಾರಿ ಕಾರ್ಕಳ ದ್ವಿತೀಯ, ಆದ್ಯ ಕಲ್ಯಾ ತೃತೀಯ ಬಹುಮಾನ ಗೆದ್ದುಕೊಂಡರು.

ಉಚ್ಚಿಲ ದಸರಾ ರೂವಾರಿ ಉದ್ಯಮಿ ಜಿ. ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ನಾರಾಯಣ ಜೆ. ಕರ್ಕೇರ, ಶ್ರೀಪತಿ ಭಟ್, ರಾಘವೇಂದ್ರ ಬೈಕಾಡಿ, ಗುಂಡು ಬಿ. ಅಮೀನ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾ ರಾಣಿ ಬೋಳೂರು, ಮನೋಜ್ ಕಾಂಚನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಸುಕುಮಾರ್ ಶ್ರೀಯಾನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಭಾಗವಹಿಸಿದ್ದರು.

ADVERTISEMENT

ಸಚಿವ ಮುನಿಯಪ್ಪ ಭೇಟಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಪತ್ನಿ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ದೇವರ ಪ್ರಸಾದ ನೀಡಿ ದ.ಕ. ಮೊಗವೀರ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಗೌರವಿಸಿದರು. ಪ್ರಸಾದ್ ಕಾಂಚನ್, ವಿನಯ್ ಕರ್ಕೇರ ಮಲ್ಪೆ, ಶರಣ್ ಕುಮಾರ್ ಮಟ್ಟು, ಗಿರಿಧರ್ ಸುವರ್ಣ, ದಯಾನಂದ ಕೆ. ಸುವರ್ಣ ಮಲ್ಪೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ರತ್ನಾಕರ್ ಸಾಲ್ಯಾನ್, ಯಜ್ಞೇಶ್ ಕರ್ಕೇರ ಹೆಜಮಾಡಿ, ಸತೀಶ್ ಸಾಲ್ಯಾನ್ ಭಾಗವಹಿಸಿದ್ದರು.

ವಿವಿಧ ಕಾರ್ಯಕ್ರಮ: ಸ್ಕಂದಮಾತಾ ಆರಾಧನೆ ನಡೆಯಿತು. ಬೆಳಿಗ್ಗೆಯಿಂದ ನಿತ್ಯಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಅಂಬಿಕಾ ಕಲ್ಪೋಕ್ತ ಪೂಜೆ ನಡೆಯಿತು. ಶಾಲಿನಿ ಜಿ. ಶಂಕರ್ ಸಭಾಭವನದಲ್ಲಿ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಮಂಗಳೂರಿನ ಅನಿಕಾ ಮತ್ತು ಅನುಷ್ಕಾ ಸಹೋದರಿಯರಿಂದ ಭರತನಾಟ್ಯ, ನೃತ್ಯ ವೈವಿಧ್ಯ, ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಪುದರ್ ದೀತಿಜಿ’ ತುಳು ನಾಟಕ ಪ್ರದರ್ಶನ ನಡೆಯಿತು.

ಇಂದಿನ ಕಾರ್ಯಕ್ರಮ: ಶನಿವಾರ (ಸೆ. 27) ನಿತ್ಯ ಚಂಡಿಕಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಮಹಿಷಮರ್ದಿನಿ ಕಲ್ಪೋಕ್ತ ಪೂಜೆ, ಭಜನಾ ಸಂಕೀರ್ತನೆ, ಹೇಮಚಂದ್ರ ಎರ್ಮಾಳ್ ಮತ್ತು ಬಳಗದಿಂದ ‘ಭಕ್ತಿ ಗೀತಾಂಜಲಿ’ ಸಂಗೀತ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟ ವಿವೇಕ ಇಂಗ್ಲೀಷ್ ಮೀಡಿಯಂ ಸ್ಕೂಲ್‌ ಮುಖ್ಯಶಿಕ್ಷಕಿ ಪ್ರೀತಿರೇಖಾ ಬ್ರಹ್ಮಾವರ ಅವರು ನವರಾತ್ರಿ ಆಚರಣೆಯ ವಿಶೇಷಗಳ ಬಗ್ಗೆ ಮಾತನಾಡುವರು. ಸಂಜೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ರಥಬೀದಿಯ ಸುತ್ತ ಸಾರ್ವಜನಿಕರಿಂದ ಸಾಮೂಹಿಕ ದಾಂಡಿಯಾ ನೃತ್ಯ ಆಯೋಜಿಸಲಾಗಿದೆ. ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಮೊಗವೀರ ಭವನದಲ್ಲಿ ಚಿತ್ರಕಲಾ ಸ್ಪರ್ಧೆ, ಶಾಲಿನಿ ಜಿ.ಶಂಕರ್ ಸಭಾಭವನದಲ್ಲಿ ಮಹಿಳೆಯರ ಹುಲಿ ಕುಣಿತ ಸ್ಪರ್ಧೆ, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.

ರಂಗೋಲಿ ಸ್ಪರ್ಧೆ: ಪ್ರಮೀಳಾ ತಿಲಕ್‌ ಪ್ರಥಮ

ಉಡುಪಿ ಉಚ್ಚಿಲ ದಸರಾದ ನಾಲ್ಕನೇ ದಿನವಾದ ಗುರುವಾರ ರಂಗೋಲಿ ಸ್ಪರ್ಧೆ ನಡೆಯಿತು. ಮಹಿಳಾ ವಿಭಾಗದಲ್ಲಿ ಪ್ರಮೀಳಾ ಶೆಟ್ಟಿ ಬೆಳ್ಮಣ್ ಪ್ರಥಮ ವಿದ್ಯಾ ವಿಶ್ವೇಶ್ ದ್ವಿತೀಯ ಮಂಗಳಾ ಸಾಲ್ಯಾನ್ ನಿಟ್ಟೂರು ತೃತೀಯ ಸ್ಥಾನ ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ತಿಲಕ್ ಪುತ್ರನ್ ಎರ್ಮಾಳ್ ಬಡಾ ಪ್ರಥಮ ಕಿರಣ್ ಕುಮಾರ್ ಕುರ್ಕಾಲು ದ್ವಿತೀಯ ಅತುಲ್ ಮಂಗಳೂರು ತೃತೀಯ ಬಹುಮಾನ ಪಡೆದರು.

ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನವದುರ್ಗೆಯರಿಗೆ ರಾತ್ರಿ ಮಹಾಪೂಜೆ ಕಲ್ಪೋಕ್ತ ಪೂಜೆ ನಡೆಯಿತು. ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಭಜನಾ ಸಂಕೀರ್ತನೆ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ರಾತ್ರಿ ‘ಛತ್ರಪತಿ ಶಿವಾಜಿ’ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಿತು.

ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ವೇದಪ್ರಕಾಶ್ ಶ್ರೀಯಾನ್ ಮುಂಬೈ ಶರಣ್ ಕುಮಾರ್ ಮಟ್ಟು ವಿನಯ್ ಕರ್ಕೇರ ಸತೀಶ್ ಕುಂದರ್ ಮಲ್ಪೆ ಗಿರಿಧರ್ ಸುವರ್ಣ ಗುಂಡು ಬಿ. ಅಮೀನ್ ದಿನೇಶ್ ಎರ್ಮಾಳ್ ಉಷಾರಾಣಿ ಬೋಳೂರು ಸುಗುಣ ಕರ್ಕೇರ ಯತೀಶ್ ಕಿದಿಯೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.