ಉಡುಪಿ: ಸಾಸ್ತಾನ ಸಮೀಪದ ಐರೋಡಿಯಲ್ಲಿ ಸೋಮವಾರ ಬೆಳಿಗ್ಗೆ ಬೇಕರಿಯ ಓವನ್ ಸ್ಫೋಟಗೊಂಡು ಮಾಲೀಕ ರಾಬರ್ಟ್ ಪುಟಾರ್ಡೊ (58) ಮೃತಪಟ್ಟಿದ್ದಾರೆ.
ಬೇಕರಿಯಲ್ಲಿದ್ದ ದೊಡ್ಡ ಓವನ್‌ಗೆ ಸಿಲಿಂಡರ್ ಅಳವಡಿಸುವಾಗ ಆಕಸ್ಮಿಕವಾಗಿ ಸ್ಫೋಟವಾಗಿದೆ. ಈ ಸಂದರ್ಭ ಬೇಕರಿಯಲ್ಲಿ ಐವರು ಕೆಲಸಗಾರರು ಇದ್ದರು. ಅವರಲ್ಲಿ ರಮೇಶ್ ಎಂಬುವರ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.