ಕುಂದಾಪುರ: ‘ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ 2023–24ನೇ ಸಾಲಿನಲ್ಲಿ ₹1,48,15,996 ಲಾಭ ಗಳಿಸಿ, ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲು ತೀರ್ಮಾನಿಸಿದೆ’ ಎಂದು ಸಂಘದ ಅಧ್ಯಕ್ಷ ಸಂತೋಷ್‌ಕುಮಾರ ಶೆಟ್ಟಿ ಹಕ್ಲಾಡಿ ಹೇಳಿದರು.
ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು 50 ವರ್ಷಗಳನ್ನು ಪೂರೈಸಿ 51ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸಂಘದಲ್ಲಿ 9,997 ‘ಅ’ ತರಗತಿಯ ಸದಸ್ಯರಿದ್ದು, ₹3,08,48,547 ಪಾಲು ಬಂಡವಾಳ ಹೊಂದಿದ್ದಾರೆ ಎಂದರು.
ಸದಸ್ಯರಿಗೆ ₹72,41,43,182 ಸಾಲ ನೀಡಲಾಗಿದೆ. ಇದರಲ್ಲಿ ಶೇ 36.85ರಷ್ಟು ಕೃಷಿ ಉದ್ದೇಶಿತ ಸಾಲ ನೀಡಲಾಗಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ₹29,46,45,000 ಹಣ ತರಿಸಿ ಸದಸ್ಯರ ಅವಶ್ಯಕತೆಗಳಿಗೆ ಒದಗಿಸಲಾಗಿದ್ದು, ಸಂಘವು ₹7,63,81,072 ನಿಧಿ ಹೊಂದಿದೆ. ವಿವಿಧ ಸಂಘ–ಸಂಸ್ಥೆಗಳಲ್ಲಿ ₹39,80,75,087 ವಿನಿಯೋಗಿಸಲಾಗಿದ್ದು, ನಬಾರ್ಡ್ ಯೋಜನೆಯನ್ವಯ ಸಂಘದಲ್ಲಿರುವ 427 ಸ್ವ–ಸಹಾಯ ಸಂಘಗಳ ಪೈಕಿ 86 ಗುಂಪುಗಳಿಗೆ ಅವರ ಬೇಡಿಕೆಯನುಸಾರ ಸಾಲ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಚಂದ್ರ ನಾಯ್ಕ್, ನಿರ್ದೇಶಕರಾದ ಎಚ್.ರಾಜೀವ ದೇವಾಡಿಗ, ಅಂಥೋನಿ ಲೂವಿಸ್, ಅನಂದು ಪಿ.ಎಚ್., ಅನಂತ ಮೊವಾಡಿ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಚಂದ್ರ ಪೂಜಾರಿ, ಸಾಧು ಎಸ್ ಬಿಲ್ಲವ, ಚಂದ್ರಮತಿ ಶೆಡ್ತಿ, ಶಾರದಾ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಪ್ರತಿನಿಧಿ ಎಸ್.ರಾಜು ಪೂಜಾರಿ, ವೃತ್ತಿಪರ ನಿರ್ದೇಶಕ ತಮ್ಮಯ ದೇವಾಡಿಗ, ವಲಯ ಮೇಲ್ವಿಚಾರಕ ಸಂದೀಪ್ ಶೆಟ್ಟಿ ಇದ್ದರು. ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್‌ಕುಮಾರ ಎಸ್.ವಿ ಅವರನ್ನು ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಪೂಜಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.