
ಪ್ರಜಾವಾಣಿ ವಾರ್ತೆ
ಉಡುಪಿ: ಶೀರೂರು ಪರ್ಯಾಯದ ಮೊದಲ ದಿನದಿಂದಲೇ, ದೇವರ ದರ್ಶನಕ್ಕೆ ಕೃಷ್ಣ ಮಠಕ್ಕೆ ಪ್ರವೇಶಿಸಲು ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ.
‘ಪುರುಷರು ಅಂಗಿ, ಬರ್ಮುಡಾ ಹಾಗೂ ಮಹಿಳೆಯರು ಹಾಫ್ ಸ್ಕರ್ಟ್, ಬರ್ಮುಡಾ ಧರಿಸಿ ಬರಬಾರದು’ ಎಂದು ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಸರೋವರದ ಮೂಲಕ ಪೂರ್ವ ಮಹಾದ್ವಾರದಿಂದ ಪ್ರವೇಶಿಸುವಾಗ ಪುರುಷರು ಅಂಗಿ ತೆಗೆದು ಶಾಲು ಹಾಕಿಕೊಂಡು ಪ್ರವೇಶಿಸಬಹುದು. ಹಿಂದೆ ಮಧ್ಯಾಹ್ನದವರೆಗೆ ಈ ನಿಯಮವಿತ್ತು, ಅದನ್ನು ಈಗ ರಾತ್ರಿವರೆಗೂ ವಿಸ್ತರಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.