ADVERTISEMENT

ಉಡುಪಿ: ಶಿಲುಬೆ ಧ್ವಂಸಗೊಳಿಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 5:03 IST
Last Updated 22 ಫೆಬ್ರುವರಿ 2025, 5:03 IST
   

ಶಿರ್ವ(ಉಡುಪಿ): ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಸಮೀಪದ ಕುದ್ರೆಮಲೆ ಎಂಬಲ್ಲಿ ದುಷ್ಕರ್ಮಿಗಳು ಶಿಲುಬೆಯನ್ನು ದ್ವಂಸಗೊಳಿಸಿದ್ದಾರೆ.

ಖಾಸಗಿ ಜಾಗದಲ್ಲಿರುವ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು 30 ವರ್ಷಗಳಿಂದ ಆರಾಧಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಫೆ.19 ರಂದು ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ದುಷ್ಕರ್ಮಿಗಳು ಶಿಲುಬೆಯನ್ನು ಹಾನಿಗೊಳಿಸಿರುವುದು ಗಮನಕ್ಕೆ ಬಂದಿದೆ.

ADVERTISEMENT

ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.