
ಹೆಬ್ರಿ: ಅನಾರೋಗ್ಯ ಬಳಲುತ್ತಿರುವ ಮುದ್ರಾಡಿ ಉಪ್ಪಳದ ಅಣ್ಣಯ್ಯ ನಾಯ್ಕ್ ಮತ್ತು ಯಶೋದಾ ನಾಯ್ಕ್ ದಂಪತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿರುವ ‘ವಾತ್ಸಲ್ಯ’ ಮನೆಯ ಪ್ರವೇಶ ಮತ್ತು ಹಸ್ತಾಂತರ ಸೋಮವಾರ ಗೋದೂಳಿ ಲಗ್ನದಲ್ಲಿ ನಡೆಯಿತು.
ಧರ್ಮಸ್ಥಳ ಯೋಜನೆಯು ಮುದ್ರಾಡಿ ಗ್ರಾಮ ಪಂಚಾಯಿತಿ, ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿಸಿಟಿ ಹಾಗೂ ವಿವಿಧ ದಾನಿಗಳ ಸಹಕಾರದಲ್ಲಿ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಲಾಯಿತು.
ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ ತುಳಸಿಕಟ್ಟೆಯಲ್ಲಿ ದೀಪ ಬೆಳಗಿದರು. ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾಕಾಂತಿ, ಸಂಘ–ಸಂಸ್ಥೆಗಳ ಪ್ರಮುಖರಾದ ಜ್ಯೋತಿ, ಮಮತಾ, ಇನ್ನೂ ಅನೇಕ ಮಹಿಳೆಯರು ದೇವರ ಚಿತ್ರ, ದೀಪ, ಹಾಲು ನೀರು, ಪ್ರಸಾದದೊಂದಿಗೆ ಮನೆ ಪ್ರವೇಶಿಸಿ ದೀಪ ಬೆಳಗಿದರು.
ಧರ್ಮಸ್ಥಳ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮನೆ ಹಸ್ತಾಂತರಿಸಿದರು. ಮನೆ ನಿರ್ಮಾಣದ ನೇತೃತ್ವ ವಹಿಸಿದ್ದ ಮೇಲ್ವಿಚಾರಕ ಉಮೇಶ್ ಬಿ.ಕೆ, ಮನೆ ನಿರ್ಮಾಣದ ವಿವರ ನೀಡಿದರು. ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು.
ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಯೋಜನೆಯ ಮೂಲಕ ನೀಡುತ್ತಿರುವ ಸೇವಾ ಸೌಲಭ್ಯಗಳನ್ನು ತಿಳಿಸಿದರು. ತಾಲ್ಲೂಕು ಅಧ್ಯಕ್ಷ ವಾದಿರಾಜ ಶೆಟ್ಟಿ, ವಲಯಾಧ್ಯಕ್ಷರಾದ ಯೋಗೀಶ್, ಜ್ಯೋತಿ, ಅಲಯನ್ಸ್ ಕ್ಲಬ್‌ನ ರಾಮಚಂದ್ರ ಭಟ್, ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ, ಲೇಡಿ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಸುನೀತಾ ಹೆಬ್ಬಾರ್, ಪಿಡಿಒ ಸುಭಾಸ್ ಖಾರ್ವಿ, ಸದಸ್ಯರಾದ ಗಣಪತಿ ಮುದ್ರಾಡಿ, ಸಂತೋಷ ಶೆಟ್ಟಿ ಉಪ್ಪಳ, ಸನತ್ ಕುಮಾರ್, ಪ್ರಮುಖರಾದ ಬಲ್ಲಾಡಿ ಚಂದ್ರಶೇಖರ ಭಟ್, ಅಶೋಕ್ ಕುಮಾರ್ ಶೆಟ್ಟಿ, ಎಳ್ಳಾರ ದೇವೇಂದ್ರ ಕಾಮತ್, ಸುಕೇಶ ಹೆಗ್ಡೆ ಕಡ್ತಲ, ಸುಧಾಕರ ಶೆಟ್ಟಿ, ಸಂತೋಷ ಪೂಜಾರಿ, ಸೇವಾಪ್ರತಿನಿಧಿ ಸುಜಯಾ, ಮಮತಾ, ಸುಕುಮಾರ್ ಪೂಜಾರಿ, ರತ್ನಾಕರ ಪೂಜಾರಿ, ಸುರೇಶ್, ಶ್ರೀನಿವಾಸ ಶೆಟ್ಟಿಗಾರ್, ಸುರೇಶ ಪೂಜಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.