ಹೆಬ್ರಿ: ಮುದ್ರಾಡಿ ಪರಿಸರದ 22 ವಿಪ್ರ ಸಮುದಾಯದ ಮನೆಗಳಿಗೆ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದರು ಭೇಟಿ ನೀಡಿ ಭಾಗವತ ಪ್ರವಚನ ನೀಡಿದರು.
ಬಳಿಕ ಗಿಲ್ಲಾಳಿ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಕೋದಂಡ ರಾಮ ದೇವರ ಪಟ್ಟದಪೂಜೆ, ಶ್ರೀಕೃಷ್ಣನ ತೊಟ್ಟಿಲು ಪೂಜೆ ನೆರವೇರಿಸಿದರು. ‘ಕೃಷ್ಣನ ಸಂದೇಶಗಳನ್ನು ಪಾಲಿಸಿದರೆ ಲೋಕ ಸುಭಿಕ್ಷವಾಗುತ್ತದೆ. ಜನರ ಕಷ್ಟ ಪರಿಹಾರವಾಗಿ ಜೀವನದಲ್ಲಿ ಮಂಗಳವಾಗುತ್ತದೆ’ ಎಂದು ಪ್ರವಚನ ನೀಡಿದರು.
ಸುದರ್ಶನ ಜೋಯಿಸ್, ಉಪ್ಪಳ ಸುದರ್ಶನ ಕಲ್ಕೂರ್, ಬಲ್ಲಾಡಿ ವೇದವ್ಯಾಸ ಭಟ್, ಹೆಬ್ರಿ ಶಿಶಿರ ಜೋಯಿಸ್ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಗೋಶಾಲೆ ಟ್ರಸ್ಟಿಗಳಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ. ರವಿ ರಾವ್ ಹೆಬ್ರಿ, ಲಕ್ಷ್ಮಣ ಭಟ್ ಹೆಬ್ರಿ, ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ ಭಟ್ ಅಜೆಕಾರು, ಮುದ್ರಾಡಿ, ಹೆಬ್ರಿ ಪರಿಸರದ ಗೋಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.