ADVERTISEMENT

ಮಣಿಪಾಲದಲ್ಲಿ ವಿಂಟೇಜ್‌ ಕಾರುಗಳ ಪ್ರದರ್ಶನ: ಅಪರೂಪದ ಕಾರು ಕಂಡು ಮನಸೋತರು

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 14:48 IST
Last Updated 26 ಜನವರಿ 2019, 14:48 IST
ಮಣಿಪಾಲದಲ್ಲಿ ಅಪರೂಪದ ಕಾರುಗಳನ್ನು ಪ್ರದರ್ಶನ ಮಾಡಲಾಯಿತು.
ಮಣಿಪಾಲದಲ್ಲಿ ಅಪರೂಪದ ಕಾರುಗಳನ್ನು ಪ್ರದರ್ಶನ ಮಾಡಲಾಯಿತು.   

ಉಡುಪಿ: ಗಣರಾಜ್ಯೋತ್ಸವದ ದಿನದ ವಿಶೇಷವಾಗಿ ಶನಿವಾರ ಮಣಿಪಾಲ ಆಟೋ ಕ್ಲಬ್‌ ಮಣಿಪಾಲದ ಎಂಡ್‌ಪಾಯಿಂಟ್‌ ರಸ್ತೆಯಲ್ಲಿ ವಿಂಟೇಜ್‌ ಕ್ಲಾಸಿಕ್‌ ಕಾರ್‌ ಶೋ ಪ್ರದರ್ಶನ ಆಯೋಜಿಸಿತ್ತು.

ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಲಹೊತ್ತು ಅಪರೂಪದ ಕಾರು ಹಾಗೂ ಬೈಕ್‌ಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು.

ಫೋರ್ಡ್‌, ಪ್ಲೈಮಥ್, ಮೋರಿಸ್ ಟೆನ್‌ ಫೋರ್‌, ಮೋರಿಸ್ ಮೈನರ್‌, ಬಗ್ ಫಿಯೆಟ್‌, ಮೋರಿಸ್‌, ಫಿಯಟ್‌ 1100, ಲ್ಯಾಂಡ್‌ ಮಾಸ್ಟರ್‌, ಫಿಯಟ್‌ ಪದ್ಮಿನಿ ಸೇರಿದಂತೆ ಹಲವು ದೇಶ ವಿದೇಶಗಳ ಕಾರುಗಳು ಗಮನ ಸೆಳೆದವು.

ADVERTISEMENT

ಜಾವಾ, ಯೆಜ್ಡಿ, ಬುಲೆಟ್‌ ಹಾಗೂ ವಿಂಟೇಜ್‌ ಬೈಕ್‌ಗಳು, ಕ್ಲಾಸಿಕ್‌ ಬೈಕ್‌ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ತುಂಬಾ ಹಳೆಯ ಹಾಗೂ ಅಪರೂಪದ ಮಾಡೆಲ್‌ ಕಾರುಗಳು ಎಲ್ಲರ ಗಮನ ಸೆಳೆಯಿತು. ದಶಕಗಳು ಕಳೆದರೂ ಬಣ್ಣ ಕಳೆದುಕೊಳ್ಳದೆ ಸುಸ್ಥಿತಿಯಲ್ಲಿದ್ದಕಾರುಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವರು ಕಾರು ಹಾಗೂ ಬೈಕ್‌ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಬಳಿಕ ಮಾಲೀಕರು ಕಾರು ಹಾಗೂ ಬೈಕ್‌ಗಳನ್ನು ಪರೇಡ್ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.