ADVERTISEMENT

ಯಕ್ಷಗಾನ ಹಿಮ್ಮೇಳ ಕಲಾವಿದ ದಿವಾಣ ಶಂಕರ ಭಟ್ ನಿಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 14:10 IST
Last Updated 5 ಸೆಪ್ಟೆಂಬರ್ 2021, 14:10 IST
ದಿವಾಣ ಶಂಕರ ಭಟ್
ದಿವಾಣ ಶಂಕರ ಭಟ್    

ಉಡುಪಿ: ಯಕ್ಷಗಾನ ರಂಗದ ಹಿರಿಯ ಹಿಮ್ಮೇಳ ಕಲಾವಿದ, ಚೆಂಡೆ-ಮದ್ದಳೆ ವಾದಕ ದಿ.ದಿವಾಣ ಭೀಮಭಟ್ಟರ ಪುತ್ರ ದಿವಾಣ ಶಂಕರ ಭಟ್ (74) ಶನಿವಾರ ಉಡುಪಿಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಸಾಂಪ್ರದಾಯಿಕ ಪದ್ಧತಿಯ ಚೆಂಡೆ-ಮದ್ದಳೆ ವಾದಕರಾಗಿ, ಕಟೀಲು ಮೇಳದಲ್ಲಿ ಹಿಮ್ಮೇಳ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.

ಕಲಾಪೋಷಕರಾದ ಟಿ.ಶ್ಯಾಮ ಭಟ್, ದಕ್ಷಿಣ ಕನ್ನಡ ಜಿಲ್ಲೆಯ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ದಿವಾಣ ಭೀಮ ಭಟ್ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ದಿವಾಣ ಗೋವಿಂದ ಭಟ್, ಹರಿನಾರಾಯಣ ಆಸ್ರಣ್ಣ, ಹಿರಣ್ಯ ವೆಂಕಟೇಶ್ವರ ಭಟ್, ಕಲಾವಿದರಾದ ಕೆ. ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಸೇರಾಜೆ ಸೀತಾರಾಮ ಭಟ್, ಜಿ.ಕೆ. ಭಟ್ ಸೇರಾಜೆ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ಪುಂಡಿಕಾ ವೆಂಕಟ್ರಮಣ ಭಟ್, ಮೂರ್ತಿ ದೇರಾಜೆ, ಡಾ. ಪೆರುವೊಡಿ ಗೋಪಾಲಕೃಷ್ಣ ಭಟ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.