ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಕೋಟದ ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಪ್ರಸ್ತುತಿಯಲ್ಲಿ 31ರವರೆಗೆ ನಡೆಯುವ ಹವ್ಯಾಸಿ ಯಕ್ಷಗಾನ ಸಪ್ತಾಹ ಸೌರಭ ಸಪ್ತಮಿಗೆ ತಲ್ಲೂರು ಶಿವರಾಮ ಶೆಟ್ಟಿ ಚಾಲನೆ ನೀಡಿದರು
ಬ್ರಹ್ಮಾವರ: ‘ಯುವಜನರಿಗೆ ಯಕ್ಷಗಾನದಂತಹ ಕಲೆಯನ್ನು ಶೈಕ್ಷಣಿಕವಾಗಿ ಮತ್ತು ಪ್ರದರ್ಶನಮುಖವಾಗಿ ಒದಗಿಸಿದಾಗ ಸಂಸ್ಕಾರ ಸಂಸ್ಕೃತಿಯ ಸಾಕ್ಷಾತ್ಕಾರವಾಗುತ್ತದೆ’ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಕೋಟದ ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಪ್ರಸ್ತುತಿಯಲ್ಲಿ 31ರವರೆಗೆ ನಡೆಯುವ ಹವ್ಯಾಸಿ ಯಕ್ಷಗಾನ ಸಪ್ತಾಹ ಸೌರಭ ಸಪ್ತಮಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಕಾರಂತ ಶುಭ ಹಾರೈಸಿದರು. ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷ ಕೋಡಿ ರಾಘವೇಂದ್ರ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಅವರು, ಕೀರ್ತಿಶೇಷ ಹಂದಾಡಿ ಬಾಲಕೃಷ್ಣನಾಯಕ್ ಅವರಿಗೆ ನುಡಿನಮನ ಸಲ್ಲಿಸಿದರು.
ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ, ಏಕದಂತ ಎಂಟರ್ ಪ್ರೈಸಸ್ ಮಾಲಿಕ ಚಂದ್ರಶೇಖರ ಕಾರಂತ ಇದ್ದರು. ಯಕ್ಷಸೌರಭದ ಸ್ಥಾಪಕಾಧ್ಯಕ್ಷ ಹರೀಶ ಭಂಡಾರಿ ಗಿಳಿಯಾರು ಸ್ವಾಗತಿಸಿದರು. ರಾಜೇಶ ಕರ್ಕೇರ ಕೋಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.