
ಅಶೋಕ್ ಆಚಾರ್ಯ
ಶಿರ್ವ: ಮೂಡಬೆಟ್ಟು ಗ್ರಾಮದ ಶಂಕರಪುರ ಸರ್ಕಾರಿ ಗುಡ್ಡೆ ಸಮೀಪದ ವ್ಯಾಸರಾಯ ಆಚಾರ್ಯ ಎಂಬುವರ ಪುತ್ರ ಅಶೋಕ್ ಆಚಾರ್ಯ (33) ಸ್ನೇಹಿತರೊಂದಿಗೆ ಅಸ್ಸಾಂ ರಾಜ್ಯದ ಗುವಾಹಟಿ ಕಾಮಾಕ್ಯ ದೇವಸ್ಥಾನಕ್ಕೆ ಪ್ರವಾಸಕ್ಕೆ ತರಳಿದ್ದ ವೇಳೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಫೆ. 8ರಂದು ಗೆಳೆಯರೊಡನೆ ಗುವಾಹಟಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅಶೋಕ್ ಪ್ರಸಾದ ಪ್ಯಾಕ್ ಮಾಡಿಟ್ಟು, ಹೋಟೆಲ್ ರೂಮ್‌ನಲ್ಲಿ ಉಳಿದುಕೊಂಡಿದ್ದರು. ಅಂದು ಬೆಳಿಗ್ಗೆ ಸ್ನಾನ ಮುಗಿಸಿ ಹೊರಬಂದಿದ್ದ ಅವರಿಗೆ ರಕ್ತದೊತ್ತಡ ಉಂಟಾಗಿ ತಲೆ ತಿರುಗಿ ಬಿದ್ದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಗೆಳೆಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ತೀರಾ ಅಸ್ವಸ್ಥತೆಗೆ ಒಳಗಾಗಿದ್ದ ಅಶೋಕ್ ಅವರು ಒಂದು ವಾರ ಕಾಲ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ತಾನು ಕೂಡಾ ಗುವಾಹಟಿಗೆ ತೆರಳಿದ್ದು, ಫೆ. 15ರಂದು ಅಶೋಕ್ ಮೃತಪಟ್ಟಿರುವುದಾಗಿ ಸಹೋದರ ರಾಜೇಶ್ ಆಚಾರ್ಯ ತಿಳಿಸಿದ್ದಾರೆ.
ಮೃತ ಅಶೋಕ್ ಅವಿವಾಹಿತರಾಗಿದ್ದು, ಉಡುಪಿ, ಸಂತೆಕಟ್ಟೆಯಲ್ಲಿ ಉತ್ತಮ ಮೆಕ್ಯಾನಿಕ್ ಆಗಿ ಗುರುತಿಸಿಕೊಂಡಿದ್ದರು. ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.