ADVERTISEMENT

ಉದ್ಘಾಟನೆಗೆ ಕಾದಿದೆ ಚಂಡಿಕಾ ಸೇತುವೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:50 IST
Last Updated 5 ಜನವರಿ 2012, 8:50 IST
ಉದ್ಘಾಟನೆಗೆ ಕಾದಿದೆ ಚಂಡಿಕಾ ಸೇತುವೆ
ಉದ್ಘಾಟನೆಗೆ ಕಾದಿದೆ ಚಂಡಿಕಾ ಸೇತುವೆ   

ಕುಮಟಾ: ತಾಲ್ಲೂಕಿನ ಅಳಕೋಡ ಪಂಚಾಯತಿ ವ್ಯಾಪ್ತಿಯ ಚಂಡಿಕಾ ಹೊಳೆಗೆ ಅಡ್ಡಲಾಗಿ ಸಾಗಡಿಬೇಣ- ಭಂಡಿವಾಳ- ಸಾಂತೂರು ನಡುವೆ ನಬಾರ್ಡ್ ಆರ್ಥಿಕ ನೆರವಿನಿಂದ ಪಂಚಾಯತ್ ರಾಜ್ ಎಂಜಿನಿಯ ರಿಂಗ್ ವಿಭಾಗ 72 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಿದ ಕಾಲುಸೇತುವೆ ನಾಲ್ಕು ಜಿಲ್ಲೆಗಳಲ್ಲಿ ಅತ್ಯುತ್ತಮ ಕಾಮಗಾರಿ ಯೆಂದು ಘೋಷಣೆಯಾಗಿದೆ.

ಸುಮಾರು 300 ಅಡಿ ಉದ್ದ ಹಾಗೂ 9 ಅಡಿ ಅಗಲದ ಕಾಲು ಸೇತುವೆ ನಿಜಕ್ಕೂ ಕಾಲು ಸೇತುವೆಗಿಂತ ತುಸು ವಿಶಾಲವೇ ಆಗಿದೆ. ಈ ಸೇತುವೆಯ ನಿರ್ಮಾಣಕ್ಕಾಗಿ ಸಾಗಡಿ ಬೇಣ, ಭಂಡಿವಾಳ, ಸಾಂತೂರು ಹಾಗೂ ಕತಗಾಲ ಗ್ರಾಮದ ಜನರು ಕಳೆದ 20 ವರ್ಷಗಳಂದ ಕನಸು ಕಂಡಿದ್ದರು. ಅವರ ಪ್ರಯತ್ನ ಸ್ಥಳೀಯ ಜನಪ್ರತಿನಿಧಿಗಳಿಗೆ `ಸೇತುವೆ ಆಗಬೇಕು~ ಎಂದು ಮನವಿ ಕೊಡುವುದಕ್ಕೆ ಮಾತ್ರ ಸಿಮಿತವಾಗಿರುತ್ತಿತ್ತು.

ಇದರಿಂದ ಪ್ರತೀ ವರ್ಷ ಮೂರ‌್ನಾಲ್ಕು ಗ್ರಾಮಗಳ ಜನರು ಮಳೆಗಾಲದಲ್ಲಿ ಅಪಾಯಕರ ರೀತಿಯಲ್ಲಿ ಹರಿವ ಚಂಡಿಕಾ ಹೊಳೆ ಯನ್ನು ದಾಟುವ ಸಾಹಸ ಮಾಡು ತ್ತಲೇ ಬದುಕುವುದು ನಡೆದಿತ್ತು.

ಯಾಣದಲ್ಲಿ ಭೈರವೇಶ್ವರನ ಜಡೆ ಯಿಂದ ಇಳಿದ ಗಂಗೆ ಮುಂದೆ ಈ ಪ್ರದೇಶದಲ್ಲಿ ಚಂಡಿಕಾ ಹೊಳೆಯ ರೂಪದಲ್ಲಿ ಹರಿಯುತ್ತಾಳೆ. ಮಳೆಗಾಲ ದಲ್ಲಂತೂ ಚಂಡಿಕಾ ಹೊಳೆ ಅಕ್ಷರಶ: ಚಂಡಿಯ ರೌದ್ರಾವತಾರದ ಪ್ರತಿರೂಪ ವಾಗುತ್ತದೆ. ಪ್ರತಿಯೊಂದು ಅಗತ್ಯ ಗಳಿಗೂ ಭಂಡಿವಾಳ ಹಾಗೂ ಸಾಂತೂರು ಗ್ರಾಮದ ಜನರು ಚಂಡಿಕಾ ಹೊಳೆಯನ್ನು ದಾಟಿಯೇ ಶಾಲೆ, ಕಾಲೇಜು, ಆಸ್ಪತ್ರೆ, ಪಂಚಾಯತಿ ಹಾಗೂ ತಾಲ್ಲೂಕು ಕೇಂದ್ರಕ್ಕೆ ಬರ ಬೇಕಾಗಿದೆ. ಬೇಸಿಗೆಯಲ್ಲಿ ಎದೆ ಮಟ್ಟದ ನೀರಿನಲ್ಲಿ ಹೊಳೆಯ್ನು ಹಾದು ಹೋಗು ವುದು, ಮಳೆಗಾಲದಲ್ಲಿ ಕಟ್ಟಿಗೆಯ ಅಪಾಯಕಾರಿ ಸಂಕದ ಮೂಲಕ  ಹೊಳೆ ದಾಟುವುದು ಇಲ್ಲಿಯ ಜನರ ಜೀವನದ ಭಾಗವಾಗಿತ್ತು. ಇದಕ್ಕೆಲ್ಲ ಒಂದು ಶಾಶ್ವತ ಪರಿಹಾರವಾಗಿ  ಸುಭದ್ರ ಕಾಲು ಸೇತುವೆಯ ನಿರ್ಮಾಣದ ಕನಸು ಹೊತ್ತ ಮೂಲತ:
ಸಾಂತೂರಿನವರಾದ ಧಾರವಾಡ  ನಿವಾಸಿ `ಸಂಸ್ಕೃತ ಭಾರತಿ~ ಸಂಘ ಟನೆಯ  ಉತ್ತರ ಕರ್ನಾಟಕ ಭಾಗದ ಪ್ರಾಂತ ಸದಸ್ಯ ಡಾ. ಕೆ ಗಣಪತಿ ಭಟ್ಟ ಅವರು ಒಂದು ದಿನ ಸಚಿವ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಕಂಡು ತಮ್ಮೂರಿನ ಸಮಸ್ಯೆ ವಿವರಿಸಿದರು. ಅದಕ್ಕೆ ಸ್ಪಂದಿ ಸಿದ ಶೆಟ್ಟರ್ ಸೇತುವೆ ನಿರ್ಮಾಣಕ್ಕೆ ಸಹಾಯ ಮಾಡಿದರು.

ಗ್ರಾಮಸ್ಥರ ಸಹಕಾರ: ಕಳೆದ ಮಾರ್ಚ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೇತುವೆ ಕಾಮಗಾರಿಗೆ ಶಿಲಾ ನ್ಯಾಸಗೈದಿದ್ದರು. ತಾಲ್ಲೂಕಿನ ಹೆಗಡೆಯ ಸ್ವತ: ಡಿಪ್ಲೋಮಾ ಎಂಜಿನಿಯರ್ ಕೂಡ ಆಗಿರುವ ಪ್ರಥಮ ದರ್ಜೆ ಗುತ್ತಿಗೆದಾರ ಯುವಕ ಗಣೇಶ ನಾಯ್ಕ ಸೇತುವೆ ಕಾಮಗಾರಿಯನ್ನು ಒಂದು ಸವಾಲಾಗಿ ತೆಗೆದುಕೊಂಡರು. ಜೂನ್ ತಿಂಗಳಲ್ಲಿ ಚಂಡಿಕಾ ಹೊಳೆಗೆ ಪ್ರವಾಹ ಬಂದು ಕಾಮಗಾರಿಗೆ ಬಳಸಿದ ಸಲಕರಣೆ, ಸೇತುವೆ ನೆಲಗಟ್ಟಿಗೆ ಹಾಕಿದ ಸಿಮೆಂಟ್ ಕಾಂಕ್ರೀಟ್ ಕೊಚ್ಚಿ ಹೋಗಿ ಹಾನಿಯಾಯಿತು. ಇಂಥ ಸಂದರ್ಭ ದಲ್ಲಲ್ಲೇ ಡಾ. ಗಣಪತಿ ಭಟ್ಟ ಹಾಗೂ ಸಾಂತೂರು, ಭಂಡಿವಾಳ ಗ್ರಾಮದ ಜನರು ಗಣೇಶ ನಾಯ್ಕರ ಜೊತೆ ಇದ್ದು ಧೈರ್ಯ, ಸಹಕಾರ ನೀಡಿದರು. ಬೇಸಿಗೆಯಲ್ಲಿ ಸೇತುವೆ ಕಂಬ ಹಾಗೂ ಮಳೆ ಬಿಡುವಿದ್ದಾಗೆಲ್ಲ ಮೇಲ್ಭಾಗದ ಕಾಮಗಾರಿ ನಡೆಸಿ ಐದು ತಿಂಗಳಲ್ಲಿ ನಿರೀಕ್ಷೆಗಿಂತ ಮೊದಲೇ ಕಾಮಗಾರಿ ಮುಗಿಸಿ ಗಣೇಶ ನಾಯ್ಕ ದಾಖಲೆ ಸ್ಥಾಪಿಸಿದರು. ಹೆಚ್ಚಿನ ಎಲ್ಲ ಸರಕಾರಿ ಕಾಮಗಾರಿಗಳು ಪಳಪೆ ಮಟ್ಟದಿಂದಾಗಿ ಸಾರ್ವಜನಿಕರ ವಿರೋಧಕ್ಕೆ ಕಾರಣ ವಾಗುತ್ತಿತ್ತು. ಆದರೆ ಸಾಂತೂರು ಕಾಲುಸೇತುವೆ ಇದಕ್ಕೆ ತದ್ವಿರುದ್ಧವಾಗಿದೆ.

`ಕಾಮಗಾರಿಯ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೆ ತಮ್ಮ ಲಾಭ ಲೆಕ್ಕಕ್ಕೆ ತೆಗೆದುಕೊಳ್ಳದೆ ಗಣೇಶ ನಾಯ್ಕರು ಸೇತುವೆ ನಿರ್ಮಿಸಿ ದಾಖಲೆ ಸ್ಥಾಪಿಸಿದ್ದಾರೆ. ಗ್ರಾಮಸ್ಥರ ಅಭಿನಂದನೆ, ಪ್ರೀತಿಗೆ ಅವರು  ಸದಾ ಪಾತ್ರರು~ ಎಂದು ಡಾ. ಗಣಪತಿ ಭಟ್ಟ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪಂಚಾಯತ್ ರಾಜ್ ಎಂಜಿನಿಯ ರಿಂಗ್‌ನ ಮುಖ್ಯ ಎಂಜಿನಿಯರ್ ಪ್ರಭಾಕರ ಚಿಣಿ, ಧಾರವಾಡ ವೃತ್ತದ ಅಧೀಕ್ಷಕ ಇಂಜಿನೀಯರ್ ಎಸ್.ಎ. ಪಾಟೀಲ್ ಸೇತುವೆ ಪರಿಶೀಲಿಸಿ ಮೆಚ್ಚುಗೆ ಸೂಸಿದ್ದಾರೆ. `ಕುಮಟಾ ತಾಲ್ಲೂಕಿನ ಗ್ರಾಮೀಣ ಮೂಲೆ ಯೊಂದರ ಕಾಮಗಾರಿ ನಾಲ್ಕು ಜಿಲ್ಲೆ ಗಳಿಗೆ ಮಾದರಿಯಾಗಿರುವುದು ನಮ್ಮ ಇಲಾಖೆಗೆ ಹೆಮ್ಮೆಯ ಸಂಗತಿ. ಈ ಕಾಮಗಾರಿ ಗುತ್ತಿಗೆದಾರ ಗಣೇಶ ನಾಯ್ಕ ಉಳಿದವರಿಗೆ ಮಾದರಿ~  ಎಂದು ಇಲಾಖೆಯ ಕುಮಟಾ ಸಹಾ ಯಕ ಕಾರ್ಯನಿರ್ವಾಹಕ ಎಂಜಿನಿ ಯರ್ ಆರ್ ಎನ್ ನಾಯ್ಕ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.