ADVERTISEMENT

ಚುರುಕಿನಿಂದ ಕೆಲಸ ಮಾಡಿ: ಜೋಶಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 6:35 IST
Last Updated 12 ಜನವರಿ 2012, 6:35 IST
ಚುರುಕಿನಿಂದ ಕೆಲಸ ಮಾಡಿ: ಜೋಶಿ
ಚುರುಕಿನಿಂದ ಕೆಲಸ ಮಾಡಿ: ಜೋಶಿ   

ಕಾರವಾರ: ಅನುದಾನ ಬಳಕೆ ಹಾಗೂ ಪ್ರಗತಿ ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ರಾಜ್ಯದಲ್ಲಿ 21 ನೇ ಸ್ಥಾನದಲ್ಲಿದ್ದು ಮಾರ್ಚ್‌ನೊಳಗಾಗಿ ನೂರರಷ್ಟು ಗುರಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್.ಜೆ. ಜೋಶಿ ಅಧಿಕಾರಿಗಳಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನ ದಲ್ಲಿ ಬುಧವಾರ ಸಂಜೆ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅನುದಾನ ಬಳಕೆ ಹಾಗೂ ಪ್ರಗತಿಯಲ್ಲಿ ಹಿನ್ನಡೆಯಾಗಿದ್ದು ಎಲ್ಲ ಇಲಾಖೆ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಕಳೆದ ಬಾರಿ 18 ಪಂಚಾಯಿತಿ ವ್ಯಾಪ್ತಿ ಯ 30 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗು ತ್ತಿತ್ತು. ಈ ಬಾರಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜೋಶಿ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿ ಉಸ್ತುವಾರಿ ಹಾಗೂ ಪರಿ ಶೀಲನೆಗೆ ಎಂಜಿನಿಯರ್‌ಗಳ ಕೊರತೆ ಯಿದ್ದು ಹೊರಗುತ್ತಿಗೆ ನೀಡುವಂತೆ ಉಪಾಧ್ಯಕ್ಷ ಉದಯ ನಾಯ್ಕ ಸೂಚಿಸಿದರು.

ತೋಟಗಾರಿಕೆ, ಹಿಂದುಳಿದ ಅಭಿ ವೃದ್ಧಿ ನಿಗಮ, ಡಾ. ಅಂಬೇಡ್ಕರ ಅಭಿವೃದ್ಧಿ ನಿಗಮಗಳು ಉತ್ತಮ ಸಾಧನೆ ಮಾಡಿವೆ. ಸಣ್ಣ ನೀರಾವರಿ ಇಲಾಖೆ ಡಿಸೆಂಬರ್ ಮಾಸಿಕ ಪ್ರಗತಿ ವರದಿಯಲ್ಲಿ ಶೂನ್ಯ ಸಾಧನೆ ಮಾಡಿ ರುವ ಕುರಿತು ಸಭೆಯಲ್ಲಿ ಅತೃಪ್ತಿ ವ್ಯಕ್ತವಾಯಿತು.

ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ಅನೇಕ ಕಾಮಗಾರಿಗಳು ಬಾಕಿಯಿದ್ದು ಅವುಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ರಸ್ತೆ ಗುಂಡಿ ತುಂಬಲು ಜಿಲ್ಲೆಗೆ ಒಂದು ಕೋಟಿ ರೂಪಾಯಿ ಅನುದಾನ ಬಂದಿದ್ದು ಕ್ರಿಯಾಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಲಾಯಿತು.

ಗ್ರಂಥಾಲಯ ಅಧಿಕಾರಿ ಕಳೆದ ಬಾರಿಯ ಸಭೆಗೆ ಪಾಲ್ಗೊಂಡಿರಲಿಲ್ಲ. ಈ ಬಾರಿಯು ಗೈರು ಹಾಜರಾದ ಕಾರಣ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಕೋರಿ ಸರಕಾರಕ್ಕೆ ಪತ್ರ ಬರೆಯುವ ಬಗ್ಗೆ ಸಭೆ ನಿರ್ಧರಿ ಸಿತು. ಜಿ.ಪಂ ಅಧ್ಯಕ್ಷೆ ಸುಮಾ ಲಮಾಣಿ, ಸ್ಥಾಯಿ ಸಮಿತ ಸದಸ್ಯರಾದ ಕೃಷ್ಣ ಜಟ್ಟಿ ಗೌಡ, ಜಯಶ್ರೀ ಮೊಗೇರ ಹಾಗೂ ಕೃಷ್ಣಾ ನಾರಾಯಣ ಗೌಡ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.