ADVERTISEMENT

ಜನಪರ ಆಡಳಿತಕ್ಕೆ ಬದ್ಧ: ಸಚಿವ ಶೆಟ್ಟರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:05 IST
Last Updated 13 ಅಕ್ಟೋಬರ್ 2011, 9:05 IST

ಅಂಕೋಲಾ: ಸಾರ್ವಜನಿಕರಿಗೆ ನೆರ ವಾಗುವ ಹಲವಾರು ಕಾರ್ಯಕ್ರಮಗಳ ಮೂಲಕ ಜನಪರ ಆಡಳಿತಕ್ಕೆ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ತನ್ನ ಬದ್ಧತೆಯನ್ನು ಸಾದರಪಡಿಸಿದ್ದು ಇನ್ನು ಮುಂದೆಯೂ ಇದಕ್ಕೆ ಸರ್ಕಾರ ಬದ್ಧವಾಗಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ  ತಿಳಿಸಿದರು. 

 ಬುಧವಾರ ನೂತನ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಉತ್ತರ ಕರ್ನಾಟಕದ ಅಭಿವೃದ್ಧಿ ಸಮಸ್ಯೆಗಳು ಆಡಳಿತದಲ್ಲಿ ಆದ್ಯತೆ ಪಡೆದುಕೊಳ್ಳುತ್ತಿವೆ. ಶಿರಸಿಗೆ ಸ್ಥಳಾಂತರಗೊಂಡಿದ್ದ ಜಿ.ಪಂ. ಎಂಜಿನಿ ಯರಿಂಗ್ ವಿಭಾಗವನ್ನು ಮರಳಿ ಕಾರ ವಾರಕ್ಕೆ ತರಲು ಇಲ್ಲಿನ ಜನರ ಆಗ್ರಹ ಪೂರ್ವಕ ಮನವಿಯನ್ನು ಮನ್ನಿಸ ಲಾಗಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾ- ಕಾರವಾರ ಕ್ಷೇತ್ರವನ್ನು ಒಳಗೊಂಡು ಸಮಗ್ರ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಚಿವ ಸಹೋದ್ಯೋಗಿ ಆನಂದ ಅಸ್ನೋಟಿಕರ ಅವರೊಂದಿಗೆ ಸೇರಿಕೊಂಡು ಶ್ರಮಿಸ ಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಆನಂದ ಅಸ್ನೋಟಿಕರ ಮತಕ್ಷೇತ್ರದ ಅಭಿವೃದ್ಧಿಯ ವಿವಿಧ ಬೇಡಿಕೆಗಳ ಮನವಿಯನ್ನು ಸಚಿವ ಜಗದೀಶ ಶೆಟ್ಟರ್ ಅವರಿಗೆ ಸಲ್ಲಿಸಿದರು.

ಜಿ.ಪಂ. ಅಧ್ಯಕ್ಷೆ ಸುಮಾ ಲಮಾಣಿ, ಉಪಾಧ್ಯಕ್ಷ ಉದಯ ಡಿ. ನಾಯ್ಕ, ಸದಸ್ಯೆ ಸರಸ್ವತಿ ಗೌಡ, ಪ.ಪಂ. ಅಧ್ಯಕ್ಷ ಭಾಸ್ಕರ ನಾರ್ವೇಕರ, ತಾ.ಪಂ. ಅಧ್ಯಕ್ಷ ಜಗನ್ನಾಥ ಗೌಡ, ಉಪಾಧ್ಯಕ್ಷೆ ದೀಪಾ ಆಗೇರ, ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಕೆ.ಎಚ್. ಗೋಪಾಲಕಷ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು. ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲ ಯದ ವಿದ್ಯಾರ್ಥಿನಿಯರು ನಾಡಗೀತೆ, ರೈತಗೀತೆ ಪ್ರಸ್ತುತಪಡಿಸಿದರು.

ಜಿಲ್ಲಾಧಿಕಾರಿ ಬಿ.ಎನ್. ಕಷ್ಣಯ್ಯ ಸ್ವಾಗತಿಸಿದರು. ಪ್ರೊ. ಎಸ್.ವಿ. ವಸ್ತ್ರದ ನಿರೂಪಿಸಿದರು. ತಹಸೀಲ್ದಾರ ಡಾ. ಉದಯಕುಮಾರ ಶೆಟ್ಟಿ ಸ್ಮರಣಿಕೆ ಗಳನ್ನು ನೀಡಿದರು. ಉಪವಿಭಾ ಗಾಧಿಕಾರಿ ಸಿ. ವಿಜಯಕುಮಾರ ವಂದಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT