ADVERTISEMENT

ಟೇಬಲ್ ಟೆನ್ನಿಸ್‌ನಲ್ಲಿ ಉನ್ನತ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 6:55 IST
Last Updated 13 ಸೆಪ್ಟೆಂಬರ್ 2011, 6:55 IST
ಟೇಬಲ್ ಟೆನ್ನಿಸ್‌ನಲ್ಲಿ ಉನ್ನತ ಸಾಧನೆ
ಟೇಬಲ್ ಟೆನ್ನಿಸ್‌ನಲ್ಲಿ ಉನ್ನತ ಸಾಧನೆ   

ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಹಿರೇ ಮೊರಬ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಜಿಲ್ಲಾಮಟ್ಟದ ಕ್ರೀಡಾಕೂಟದ `ಟೇಬಲ್ ಟೆನ್ನಿಸ್~ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.

ಈ ಶಾಲೆಯಲ್ಲಿ ಟೇಬಲ್ ಟೆನ್ನಿಸ್ ಆಡಲು ಉತ್ತಮ ಗುಣಮಟ್ಟದ ಸಾವಿ ರಾರು ರೂಪಾಯಿ ಬೆಲೆಬಾಳುವ ಟೇಬಲ್ ಇದೆಯೆಂದರೆ ಅಚ್ಚರಿ ಯಾಗದೇ ಇರಲಾರದು. ಈ ಟೇಬಲ್ ಅನ್ನು ಇಲಾಖೆಯಿಂದ ಪಡೆಯಲು ಹರಸಾಹಸ ಪಡಬೇಕಾಯಿತು.

ಅನೇಕ ತೊಂದರೆಗಳ ನಡುವೆ ಟೇಬಲ್ ಅನ್ನು ಪಡೆಯಲು ಯಶಸ್ವಿಯಾಗಿ ಅಂದಿ ನಿಂದಲೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಬಂದಿರುವುದು ಶಾಲೆಯ ಹೆಗ್ಗಳಿಕೆ. ಅಲ್ಲದೇ ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ಪ್ರೋತ್ಸಾಹ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ.

2003-04ನೇ ಸಾಲಿನ ರುಬಿಯಾ ಭಾನು ಶೇತ್ಸನದಿ, ನಗೀನಾ ದೊಡ್ಮನಿ, ಮಲ್ಲಮ್ಮ ಪೂಜಾರ, ಶೃತಿ ಪುಟ್ಟತಮ್ಮ ನವರ ಮತ್ತು ಶಶಿಧರ ಪುಟ್ಟತಮ್ಮ ನವರ ಇವರಿಂದ ಪ್ರಾರಂಭವಾದ ಜಯದ ಸರಣಿ ಇಂದೂ ಕೂಡಾ ಮುಂದುವರಿಯುತ್ತಿದೆ.

ಎಲ್ಲರೂ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಾ ಬಂದಿದ್ದಾರೆ. 2005-06 ರಲ್ಲಿ ಅಮ್ರಿನ ತಾಜ ಅತ್ತಾರ, ಶ್ರುತಿ ಮತ್ತೂರ 07-08 ರಲ್ಲಿ ಅಶ್ವಿನಿ ಆರ್.ವೈ. ಆಶಾ ಕುರುಬಗೊಂಡ, ಲತಾ ದೊಡ್ಮನಿ 08-09 ರಲ್ಲಿ ಗೀತಾ ಹುರಕಟ್ಲಿ ಶ್ರುತಿ ಶಿದ್ಲಿಂಗಪ್ಪನವರ ರಾಜು ಪುಟ್ಟತಮ್ಮ ನವರ  09-10 ರಲ್ಲಿ ಶ್ರುತಿ ಶಿದ್ಲಿಂಗಪ್ಪ ನವರ, ರತ್ನಾ ಹಂಚಿನಮನಿ ಮಮತಾ ಹೊಸಮನಿ 10-11 ರಲ್ಲಿ ರತ್ನಾ ಹಂಚಿನಮನಿ  ಮಮತಾ ಹೊಸಮನಿ 11-12 ರಲ್ಲಿ ದೀಪಾ ಜೋಗಿಹಳ್ಳಿ, ವೀಣಾ  ರೋತಿ ಮತ್ತು ನಿರ್ಮಲಾ ಹಂಚಿನಮನಿ ಜಿಲ್ಲಾ ಮಟ್ಟದ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಹಂತಕ್ಕೆ ಆಯ್ಕೆಯಾದರು. 

ಮುಖ್ಯೋಪಾಧ್ಯಾಯರಾದ ಎಸ್. ವೈ ಕೋರನಾಯ್ಕರ ದೈಹಿಕ ಶಿಕ್ಷಕರಾದ ಮೃತ್ಯುಂಜಯ ಹರವಿಶೆಟ್ಟರ ಶಿಕ್ಷಕ ವೃಂದದ ಪ್ರೇರಣೆ ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ ಉನ್ನತ ಸಾಧನೆಗೆ ನೆರವಾಗಿದೆ.                                                                                                                    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.