ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಹಾಯಕ ನಿರ್ದೇಶಕರಾಗಿ ಬಸವರಾಜ ಹೂಗಾರ ಈಚೆಗೆ ಅಧಿಕಾರ ವಹಿಸಿಕೊಂಡರು. ಪ್ರಭಾರ ನಿರ್ದೇಶಕರ ಅಶೋಕ ಚಲವಾದಿ ಅವರ ವರ್ಗಾವಣೆಯಿಂದ ಈ ಸ್ಥಾನ ತೆರವಾಗಿತ್ತು.
ತುಮಕೂರು, ಮಂಡ್ಯ, ಬಾಗಲಕೋಟೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಹೂಗಾರ ಅವರು ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ್ದಾರೆ. ಅವರ `ತತ್ರಾಣಿ~ ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ `ಕಡೆಂಗೋಡ್ಲು~ ಕಾವ್ಯ ಪ್ರಶಸ್ತಿಗೂ ಬಸವರಾಜ ಭಾಜನರಾಗಿದ್ದಾರೆ. `ಬೆಸ್ಟ್ ಆಫ್ ಕೃಷ್ಣಮೂರ್ತಿ~ ಇವರ ಸಂಪಾದಿತ ಕೃತಿ. ಸಾಹಿತ್ಯ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರು ಇಲ್ಲಿಗೆ ಸಹಾಯಕ ನಿರ್ದೇಶಕರಾಗಿ ಬಂದಿರುವುದಕ್ಕೆ ಸ್ಕೋಡವೆಸ್ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.