ADVERTISEMENT

ಮುಳುಗುತ್ತಿದ್ದ ದೋಣಿಯಿಂದ 28 ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:19 IST
Last Updated 11 ಅಕ್ಟೋಬರ್ 2019, 15:19 IST
ಭಟ್ಕಳದ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯನ್ನು ಇತರ ದೋಣಿಗಳ ಸಹಾಯದಿಂದ ರಕ್ಷಿಸಿ ದಡಕ್ಕೆ ಎಳೆದು ತರುತ್ತಿರುವುದು
ಭಟ್ಕಳದ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯನ್ನು ಇತರ ದೋಣಿಗಳ ಸಹಾಯದಿಂದ ರಕ್ಷಿಸಿ ದಡಕ್ಕೆ ಎಳೆದು ತರುತ್ತಿರುವುದು   

ಭಟ್ಕಳ: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಯ ಮೀನುಗಾರರೇ ರ‌ಕ್ಷಿಸಿದ್ದಾರೆ. ಅದರಲ್ಲಿದ್ದ ಎಲ್ಲ 28 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

ಸಮುದ್ರ ದಡದಿಂದ25 ನಾಟಿಕಲ್ ಮೈಲು (ಸುಮಾರು 46 ಕಿ.ಮೀ)ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ದೋಣಿಯುಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಮಧುಕರ ಪೂಜಾರಿ ಎಂಬುವವರದ್ದಾಗಿದೆ. ‘ಮೂಕಾಂಬಿಕಾ’ ಹೆಸರಿನ ಆ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ಹೋಗಲಾಗಿತ್ತು.

ದೋಣಿಯ ತಳಭಾಗ ಒಡೆದುಮುಳುಗುವ ಹಂತ ತಲುಪಿದ್ದನ್ನುಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿದರು. ಕೂಡಲೇ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿಯನ್ನು ಎಳೆದು ದಡಕ್ಕೆ ತರಲಾಯಿತು ಎಂದುಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.