ADVERTISEMENT

ದಾಂಡೇಲಿಯಲ್ಲಿ ಕಂಡು ಬಂದ ಹಳದಿ ಕಾಲಿನ ಹಸಿರು ಪಾರಿವಾಳ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 5:00 IST
Last Updated 15 ಫೆಬ್ರುವರಿ 2025, 5:00 IST
ದಾಂಡೇಲಿಯ ಹವ್ಯಾಸಿ ಛಾಯಾಗ್ರಾಹಕ ಹಾಗೂ ಪಕ್ಷಿ ಪ್ರೇಮಿ ರಾಹುಲ್ ಬಾವಾಜಿ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಹಳದಿ ಕಾಲಿನ ಹಸಿರು ಪಾರಿವಾಳ
ದಾಂಡೇಲಿಯ ಹವ್ಯಾಸಿ ಛಾಯಾಗ್ರಾಹಕ ಹಾಗೂ ಪಕ್ಷಿ ಪ್ರೇಮಿ ರಾಹುಲ್ ಬಾವಾಜಿ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಹಳದಿ ಕಾಲಿನ ಹಸಿರು ಪಾರಿವಾಳ   

ದಾಂಡೇಲಿ: ನಗರದ ಬಂಗೂರನಗರ ಜೂನಿಯರ್ ಕಾಲೇಜಿನ ಹತ್ತಿರದ ಆಲದ ಮರದಲ್ಲಿ ಪ್ರವಾಸೋದ್ಯಮ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ರಾಹುಲ್ ಬಾವಾಜಿ ಅವರ ಕ್ಯಾಮೆರಾ ಕಣ್ಣಿಗೆ ಹಳದಿ ಕಾಲಿನ ಹಸಿರು ಪಾರಿವಾಳ (ವೈಜ್ಞಾನಿಕ ಹೆಸರು ಟ್ರೆರಾನ್ ಫಿನಿಕಾಪ್ಟೆರಸ್) ಶನಿವಾರ ಸೆರೆ ಸಿಕ್ಕಿದೆ.

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಹಸಿರು ಪಾರಿವಾಳ ಮಹಾರಾಷ್ಟ್ರದ ರಾಜ್ಯ ಪಕ್ಷಿ. ಮರಾಠಿಯಲ್ಲಿ ಹರೋಲಿ ಅಥವಾ ಹರಿಯಲ್ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ ಹೈಥಾ ಮತ್ತು ಹೈಟೋಲ್ ಎಂದು ಸಹ ಕರೆಯುತ್ತಾರೆ.

ಇವುಗಳು ಹಿಂಡು ಹಿಂಡಾಗಿ ಹೆಚ್ಚಾಗಿ ದಟ್ಟವಾದ ಅರಣ್ಯ ಪ್ರದೇಶಗಳ ಆಲದ ಮರಗಳಲ್ಲಿ ಕಂಡುಬಂದರೆ ಅಪರೂಪಕ್ಕೆ ನಗರ ಪ್ರದೇಶದ ಆಲದ ಮರದಲ್ಲಿ ಕಂಡುಬರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.