ADVERTISEMENT

‘ಮೋದಿ ಸಂಪುಟದಲ್ಲಿ ಅನಂತಕುಮಾರ ಕಳಂಕಿತ’

ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 13:44 IST
Last Updated 19 ಮಾರ್ಚ್ 2019, 13:44 IST
ಸೂರಜ್ ನಾಯ್ಕ ಸೋನಿ
ಸೂರಜ್ ನಾಯ್ಕ ಸೋನಿ   

ಕಾರವಾರ:‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕಳಂಕಿತ ಮಂತ್ರಿ ಎಂದರೆ ಅನಂತಕುಮಾರ ಹೆಗಡೆ ಒಬ್ಬರೇ. ಅವರಿಗೆ ಸಚಿವ ಸ್ಥಾನ ಕೊಟ್ಟ ಕಾರಣದಿಂದಲೇ ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಅನಿಸುತ್ತಿದೆ’ ಎಂದು ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ಚುನಾವಣೆಗಳಲ್ಲಿ ಅಪ್ಪನೇ ತಮಗೆಮತ ಹಾಕಿರುವುದು ಅನುಮಾನಎಂದು ಅನಂತಕುಮಾರ ಹೆಗಡೆಯವರೇ ಹೇಳಿದ್ದಾರೆ. ತಮ್ಮ ಮಗನಾಲಾಯಕ್ಎಂದುಅವರ ಅಪ್ಪನಿಗೆ ಮಾತ್ರಗೊತ್ತಿತ್ತು. ಈಗ ಎಲ್ಲರಿಗೂ ತಿಳಿಯಿತು’ಎಂದು ಲೇವಡಿ ಮಾಡಿದರು.

‘ಅನಂತಕುಮಾರ ಹೆಗಡೆ ದುರಹಂಕಾರದ ವ್ಯಕ್ತಿ. ಅವರಿಗೆ ಮಾತಿನಲ್ಲಿ ಹಿಡಿತ ಇಲ್ಲ. ಮಹಾತ್ಮ ಗಾಂಧಿಯನ್ನೂ ಹೀಯಾಳಿಸುತ್ತಾರೆ. ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಹಿಂದುಳಿದವರನ್ನೂ ಬೈಯ್ಯುತ್ತಾರೆ. ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಬಿಜೆಪಿಯವರಿಗೆ ಒತ್ತಾಯಿಸಿದ್ದೆವು. ಆದರೆ, ಅವರು ಕೇಳುವಂತೆ ಕಾಣುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪರೇಶ್ ಮೇಸ್ತ ಸಾವುಪ್ರಕರಣದಲ್ಲಿ ಒಂದೊಂದು ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆಎಂದು ಭರವಸೆ ನೀಡಿದ್ದರು. ಆದರೆ, ಉತ್ತರಕುಮಾರನನ್ಯಾಯ ಎಲ್ಲಿ ಹೋಯ್ತು?ನಾಪತ್ತೆಯಾದ ಸುವರ್ಣ ತ್ರಿಭುಜ ದೋಣಿಯ ಬಗ್ಗೆ ಸಚಿವರು ಮಾತನಾಡುವುದಿಲ್ಲ. ಎಲ್ಲರೂ ಮೋದಿ ಸರ್ಕಾರ ದೇಶದಲ್ಲಿ ಬದಲಾವಣೆ ತಂದಿದೆ ಎಂದು ಹೇಳುತ್ತಾರೆ. ಆದರೆ, ನಮ್ಮ ಉತ್ತರ ಕನ್ನಡದಲ್ಲಿ ಅನಂತಕುಮಾರ ಹೆಗಡೆಇರುವ ಕಾರಣ ಅದು ಕಾಣುತ್ತಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿಯಲ್ಲಿ ಮಾತ್ರ ಹಿಂದುತ್ವ ಇದೆ ಎಂದು ಜನರನ್ನು ನಂಬಿಸಿದ್ದಾರೆ. ಎಚ್.ಡಿ.ರೇವಣ್ಣ, ಎಚ್.ಡಿ.ದೇವೇಗೌಡ ಅವರು ಹೆಜ್ಜೆ ಇಡುವಾಗಲೂ ಪೂಜೆ, ಪುನಸ್ಕಾರ, ಹೋಮ ಮಾಡುತ್ತಾರೆ. ಅದು ಹಿಂದುತ್ವ ಅಲ್ಲವೇ? ಇಡೀ ದೇಶವೇ ಜಾತ್ಯತೀತತೆಯನ್ನು ಒಪ್ಪಿಕೊಂಡಿದೆ’ ಎಂದರು.

‘ಅತಿ ಹೆಚ್ಚು ಅರಣ್ಯ ಪ್ರದೇಶವಿರುವ ಈ ಜಿಲ್ಲೆಯ ಅರಣ್ಯ ವಾಸಿಗಳನ್ನು ರಕ್ಷಿಸಲು ಜಿಲ್ಲೆಗಾಗಿ ಒಂದು ಕಾನೂನು ರೂಪಿಸಲು ಸಂಸತ್ತಿನಲ್ಲಿ ಪ್ರಯತ್ನಿಸಬಹುದಿತ್ತು. ಅದನ್ನೂ ಮಾಡಿಲ್ಲ. ಹಿಂದಿನಚುನಾವಣೆಗಳಲ್ಲಿ ಎಲ್ಲರನ್ನೂ ಮರುಳು ಮಾಡಿಕೊಂಡೇ ಬಂದ ಅನಂತಕುಮಾರ ಹೆಗಡೆ ಅವರನ್ನು ನಾವೂನಂಬಿದ್ದೆವು. ಆದರೆ, ಈಗ ಅರ್ಥ ಆಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.