ADVERTISEMENT

ಗೋಕರ್ಣ: ಮತ್ತೊಂದು ಕಡಲಾಮೆಯ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 13:29 IST
Last Updated 11 ಅಕ್ಟೋಬರ್ 2021, 13:29 IST
ಗೋಕರ್ಣದ ಮೇನ್ ಬೀಚಿನಲ್ಲಿ ಸೋಮವಾರ ಪತ್ತೆಯಾದ ಆಮೆಯ ಕಳೇಬರ
ಗೋಕರ್ಣದ ಮೇನ್ ಬೀಚಿನಲ್ಲಿ ಸೋಮವಾರ ಪತ್ತೆಯಾದ ಆಮೆಯ ಕಳೇಬರ   

ಗೋಕರ್ಣ: ಇಲ್ಲಿನ ಮೇನ್ ಬೀಚಿನಲ್ಲಿ ಮತ್ತೊಂದು ಕಡಲಾಮೆಯ ಮೃತದೇಹ ಸೋಮವಾರ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಶನಿವಾರ ಕಡಲಾಮೆಯೊಂದರ ಕಳೇಬರ ಪತ್ತೆಯಾಗಿತ್ತು.

ಗಾತ್ರದಲ್ಲಿ ಚಿಕ್ಕದಿದ್ದು, ಮರಿ ಇರಬಹುದು ಎಂದು ಊಹಿಸಲಾಗಿದೆ. ಸುಮಾರು 5 ಕೆ.ಜಿ.ಗಳಷ್ಟು ತೂಕವಿದೆ. ಎರಡು ದಿವಸದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಆಮೆಗಳು ಸಾಯಲು ನಿಖರವಾದ ಕಾರಣ ತಿಳಿದುಬಂದಿಲ್ಲ.

ಕಡಲತೀರವನ್ನು ಸ್ವಚ್ಛ ಮಾಡುವವರು ಮೊದಲು ನೋಡಿದ್ದು, ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ಅವರ ಗಮನಕ್ಕೆ ತಂದರು. ಅವರು ಅರಣ್ಯ ಇಲಾಖೆಯವರಿಗೆ ತಿಳಿಸಿ, ಸ್ಥಳಕ್ಕೆ ಬಂದು ಪಂಚನಾಮೆ ಮಾಡಿ ಮುಂದಿನ ಕ್ರಮ ಕೈಗೊಂಡರು.

ADVERTISEMENT

ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಕರಾವಳಿಯ ವಿವಿಧೆಡೆ ಆರಕ್ಕೂ ಅಧಿಕ ಆಮೆಗಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಮೀನುಗಾರರ ಬಲೆಗೆ ಸಿಲುಕಿ ಸಾಯುತ್ತಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.