
ಪ್ರಜಾವಾಣಿ ವಾರ್ತೆ
ಬಂಧನ
ಭಟ್ಕಳ: ತಾಲ್ಲೂಕಿನ ಹೆಬಳೆಯ ಪಿರ್ದೋಸ ನಗರ ಮೈದಾನದಲ್ಲಿ ಗುರುವಾರ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹೆಬಳೆ ಬದ್ರಿಯಾ ಕಾಲೊನಿ ನಿವಾಸಿ ಅಬ್ದುಲ್ ಮಜೀದ ಮೊಹಮ್ಮದ ಇಸ್ಮಾಯಿಲ್ (32) ಹಾಗೂ ಜಾಲಿ ತಗ್ಗರಗೋಡ ನಿವಾಸಿ ಮೊಹಮ್ಮದ್ ಜಾಕೀರ ಅಬ್ದುಲ್ ರಜಾಕ್ (28) ಬಂಧಿತ ಯುವಕರು. ವೈದ್ಯಕೀಯ ತಪಾಸಣೆ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.