ಹಳಿಯಾಳ: ಬಕ್ರೀದ್ ಹಬ್ಬದ ದಿನದಂದು ಗೋ ಹತ್ಯೆ ತಡೆಯಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಬುಧವಾರದಂದು ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ ಹಾಗೂ ಸಿಪಿಐ ಜಯಪಾಲ ಪಾಟೀಲ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭಾರತ ಸಂಸ್ಕೃತಿಯಲ್ಲಿ ಗೋಮಾತೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿ ಸಲ್ಲಿಸುತ್ತಾರೆ. ಗೋಮಾತೆ ಅಮೃತ ನೀಡುವ ದೇವತೆ. ಗೋವಿನ ಹಾಲು ಅಮೃತಕ್ಕೆ ಸಮ ಪವಿತ್ರ ಎಂದು ಭಾವಿಸುತ್ತೇವೆ. ಪೂಜಾ ಹೋಮ ಹವನಗಳಲ್ಲಿ ಪ್ರಥಮ ಸ್ಥಾನ ನೀಡಲಾಗುವ ಗೋ ಮಾತ್ರವಲ್ಲದೆ ಹಸುವಿನ ಹಾಲು ಸಗಣಿ ಗೋಮೂತ್ರ ಇವೆಲ್ಲ ಶ್ರೇಷ್ಠ ಹಾಗೂ ಔಷಧಿಯ ರೂಪದಲ್ಲಿ ಬಳಸುವರು ಇದ್ದಾರೆ. ಸನಾತನ ಧರ್ಮದಲ್ಲಿ ಗೋಮಾತೆಯನ್ನು ದೇವರು ರೂಪದಲ್ಲಿ ಸಮಸ್ತ ಭಾರತೀಯರು ಕಾಣುತ್ತಾರೆ. ಜೂನ್ 7 ರಂದು ಬಕ್ರೀದ್ ಹಬ್ಬ ಇದ್ದು ಗೋವನ್ನು ವಧೆ ಮಾಡಿ ನಂತರ ಈ ಹಬ್ಬವನ್ನು ಆಚರಿಸುವ ರೂಢಿರುತ್ತದೆ. ಬಕ್ರೀದ್ ಹಬ್ಬದ ದಿನ ಗೋಮಾತೆ ವಧೆ ಮಾಡದೇ ಹಬ್ಬ ಆಚರಿಸಬೇಕು. ಒಂದಾನು ವೇಳೆ ಗೋ ವಧೆಯ ವಿಷಯ ತಿಳಿದು ಬಂದಿಲ್ಲಿ ಗೋ ಪ್ರೇಮಿಗಳೆಲ್ಲರೂ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ತಾಲ್ಲೂಕು ಅಧ್ಯಕ್ಷ ವಿಠ್ಠಲ ಸಿದ್ದಣ್ಣವರ, ಮುಖಂಡ ಮಂಗೇಶ ದೇಶಪಾಂಡೆ, ಸಂತೋಷ್ ಘಟಕಾಂಬಳೆ, ತಾನಾಜಿ ಪಟ್ಟೇಕರ, ಯಲ್ಲಪ್ಪ ಹೆಳವರ, ಅರುಣ ನಾಕಾಡಿ, ಸಹದೇವ ಮಿರಾಶಿ, ಮುತ್ತು ಚಲವಾದಿ, ನಾಮದೇವ ಕಾಮ್ರೇಕರ, ರಾಹುಲ ಬೋಬಾಟಿ, ಮಾಲಾ ಹುಂಡೇಕರ, ವಿನೋದ ಗಿಂಡೆ, ಸುರೇಶ ಧಾರವಾಡಕರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.