
ಕಾರವಾರ: ‘ಮೊಬೈಲ್ ಗೀಳು ಸೃಜನಶೀಲತೆ ಕೊಲ್ಲುತ್ತದೆ. ಪುಸ್ತಕಗಳ ಓದು ಮನಸ್ಸು ವಿಚಲಿತವಾಗದೇ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಅಡಿಪಾಯವಾಗುತ್ತದೆ’ ಎಂದು ಕೈಗಾದ ಅಣು ವಿದ್ಯುತ್ ನಿಗಮದ ಕಾರ್ಯನಿರ್ವಹಣಾ ಅಧೀಕ್ಷಕ ಎಸ್.ಜೆ.ಟಿ.ಸ್ವಾಮಿ ಹೇಳಿದರು.
ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್‌ಶಿಪ್‌ನಲ್ಲಿನ ಸಹ್ಯಾದ್ರಿ ಭವನದಲ್ಲಿ ಸಹ್ಯಾದ್ರಿ ಕನ್ನಡ ಸಂಘದ ಗ್ರಂಥಾಲಯ ವಿಭಾಗವು ಓದುಗರಿಗೆ ಆಯೋಜಿಸುತ್ತಿರುವ ‘ಹೊತ್ತಿಗೆಯ ಹೊತ್ತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮನುಷ್ಯ ಚಾರಿತ್ರ್ಯಕ್ಕೆ ಧಕ್ಕೆ ತಂದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ. ಮೊಬೈಲ್ ಬಳಕೆಗೆ ದಿನದ ಬಹುಹೊತ್ತು ಮೀಸಲಿಡುವ ಬದಲು ಉತ್ತಮ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ’ ಎಂದರು.
ಹಿರಿಯ ತಾಂತ್ರಿಕ ಎಂಜಿನಿಯರ್ ಶ್ರೀಮತಿ ನಾಚಿಮ್ಮಯ್ಯ, ಸಂಘದ ಅಧ್ಯಕ್ಷ ಜೀತೇಂದ್ರ, ಕಾರ್ಯದರ್ಶಿ ರಾಘವೇಂದ್ರ, ಫಣಿರಾಜ್, ಗಜಾನನ ನಾಯ್ಕ, ಗೌಡಪ್ಪನವರ ಶಿವಕುಮಾರ್, ಮೊಹಮ್ಮದ್ ಹರಿಬಿಡಿ, ಕುಬೇರಪ್ಪ ಪೂಜಾರ್, ಕೆ.ಎಸ್.ಮೋಹನ, ಮಹಾಂತೇಶ ಓಶೀಮಠ, ಎಸ್.ಆರ್.ಎನ್.ಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.