ಶಿರಸಿ: ’ಯಾವುದೇ ಕೃತಿ, ಸಂಗತಿಯು ವರ್ತಮಾನಕ್ಕೆ ಅನ್ವಯಿಸುವಂತೆ ಇದ್ದರೆ ಯಾವುದೇ ಕಾಲಕ್ಕೂ ಪ್ರಸ್ತುತವಾಗಿರುತ್ತದೆ’ ಎಂದು ಲೇಖಕ, ಅರ್ಥಧಾರಿ ನಾರಾಯಣ ಯಾಜಿ ಹೇಳಿದರು.
ತಾಲ್ಲೂಕಿನ ಯಡಳ್ಳಿಯ ಸುಕರ್ಮ ಸಭಾಂಗಣದಲ್ಲಿ ಭಾನುವಾರ ನಡೆದ ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೇಕೇರಿ ಅವರು ಬರೆದ ‘ಪುರುಷ ಸೂಕ್ತ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘92 ವರ್ಷದ ಬೆಳ್ಳೇಕೇರಿ ಅವರ ತಪಸ್ಸಿನ ಫಲವೇ ಈ ಕೃತಿ. ಜ್ಞಾನ, ವಿಜ್ಞಾನದ ಮೇಲೂ ಇಲ್ಲಿ ಅರ್ಥೈಸಲಾಗಿದೆ. ಮೋಕ್ಷದ ದಾರಿಯ ಬಗ್ಗೆಯೂ ಕೃತಿಯಲ್ಲಿ ಸಾರಲಾಗಿದೆ’ ಎಂದರು.
ಕೃತಿ ಬಿಡುಗಡೆಗೊಳಿಸಿದ ವಿದ್ವಾನ್ ಶಂಕರ ಭಟ್ ಬಾಲಿಗದ್ದೆ ಮಾತನಾಡಿ, ‘ಹೊಸ ಅರ್ಥದಲ್ಲಿ ಪ್ರಕಾಶಿಸುವ ಸಾಮರ್ಥ್ಯ ವೇದ ಮಂತ್ರಗಳಿಗೆ ಇದೆ’ ಎಂದರು.
ಹಿರಿಯ ವಿದ್ವಾಂಸ ಉಮಾಕಾಂತ ಭಟ್ ಕೆರೇಕೈ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಚಿತ್ರಕಾರ ಸತೀಶ ಯಲ್ಲಾಪುರ ಮಾತನಾಡಿದರು. ರಘುಪತಿ ಯಾಜಿ ಪ್ರಕಾಶನದ ಕುರಿತು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೇಕೇರಿ ಅಧ್ಯಕ್ಷತೆ ವಹಿಸಿದ್ದರು. ಕಿಶೋರ ಹೆಗಡೆ ಸ್ವಾಗತಿಸಿದರು. ವೆಂಕಟಾಚಲ ಭಟ್ ಕರಸುಳ್ಳಿ ನಿರ್ವಹಿಸಿದರು. ಆರ್.ಟಿ.ಭಟ್ ವಂದಿಸಿದರು. ಪುರುಷ ಸೂಕ್ತದ ಮಂತ್ರಘೋಷ ನಡೆಸಲಾಯಿತು.
ಕೃತಿ: ಪುರುಷ ಸೂಕ್ತ
ಕೃತಿಕಾರ: ಆರ್.ಎಸ್.ಹೆಗಡೆ ಬೆಳ್ಳೇಕೇರಿ
ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ
ಪುಟ: 176
ಬೆಲೆ: ₹250
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.