ADVERTISEMENT

ಸ್ಫೋಟದ ವಸ್ತು ಕಚ್ಚಿ ಗಾಯಗೊಂಡ ಜಾನುವಾರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 1:19 IST
Last Updated 7 ಏಪ್ರಿಲ್ 2021, 1:19 IST
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಜಲಾಶಯದ ಸನಿಹ ಅರಣ್ಯ ಸಿಬ್ಬಂದಿ ಭೇಟಿ ನೀಡಿ, ಸ್ಫೋಟದ ವಸ್ತು ಸಿಕ್ಕ ಜಾಗದಲ್ಲಿ ಪರಿಶೀಲನೆ ನಡೆಸಿದರು
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಜಲಾಶಯದ ಸನಿಹ ಅರಣ್ಯ ಸಿಬ್ಬಂದಿ ಭೇಟಿ ನೀಡಿ, ಸ್ಫೋಟದ ವಸ್ತು ಸಿಕ್ಕ ಜಾಗದಲ್ಲಿ ಪರಿಶೀಲನೆ ನಡೆಸಿದರು   

ಮುಂಡಗೋಡ: ತಾಲ್ಲೂಕಿನ ಸನವಳ್ಳಿ ಜಲಾಶಯದ ಸನಿಹ, ಮೇಯಲು ಹೋಗಿದ್ದ ಹೋರಿಯೊಂದು ಬಿದ್ದಿದ್ದ ಸ್ಫೋಟಕ ವಸ್ತುವೊಂದನ್ನು ಕಚ್ಚಿ, ಗಂಭೀರವಾಗಿ ಗಾಯಗೊಂಡಿದೆ.

ಸನವಳ್ಳಿ ಫ್ಲಾಟ್ ನಿವಾಸಿ ಅಪ್ಪು ನಾಯರ್ ಎಂಬುವರಿಗೆ ಸೇರಿದ ಜಾನುವಾರು ಇದಾಗಿದೆ. ಹೋರಿಯ ಬಾಯಿ ಸುಟ್ಟಿದೆ.

ಜಲಾಶಯದ ಸನಿಹ ಕಾಡುಪ್ರಾಣಿಗಳು ನೀರು ಕುಡಿಯಲು ಬರುವ ದಾರಿಯನ್ನೇ ಗಮನಿಸಿ, ಯಾರೋ ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸ್ಫೋಟಕ ಇಟ್ಟಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳದ ಸನಿಹದಲ್ಲಿಯೇ ಉಂಡೆ ಆಕಾರದ ವಸ್ತುವೊಂದು ಸಿಕ್ಕಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.