ದಾಂಡೇಲಿ: ನಗರದ ರೋಟರಿ ಕ್ಲಬ್ ವತಿಯಿಂದ ಅವಿಘ್ನ ರೀಲೆ 2024( ವಿದ್ಯಾರ್ಥಿಗಳಿಗೆ ಮಣ್ಣಿನಿಂದ ಗಣಪತಿ ತಯಾರಿಸುವ ಕಾರ್ಯಾಗಾರ) ಕಾರ್ಯಕ್ರಮ ನಗರದ ರೋಟರಿ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ಈ ರೀಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿಗೆ ಮಣ್ಣಿನ ಗಣೇಶ ಮೂರ್ತಿ ಮಾಡುವ ಪ್ರಾತ್ಯಕ್ಷಿಕೆ ನೀಡಿ, ಮಣ್ಣಿನಿಂದ ಗಣಪತಿ ಮೂರ್ತಿ ತಯಾರಿಸಲಾಯಿತು.
ಪ್ರಕೃತಿಯಲ್ಲಿನ ವಸ್ತುಗಳಿಂದ ಪ್ರಕೃತಿಗೆ ಕೊಡುಗೆ ನೀಡುವ ಉದ್ದೇಶದಿಂದ ಈ ರೀಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿಯಲ್ಲಿ ವಿವಿಧ ಜಾತಿ ಮರಗಳ ಬೀಜಗಳನ್ನು ಇಡಲಾಗಿದ್ದು, ಈ ಮೂರ್ತಿಗಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಆನಂತರ ಅದರಲ್ಲಿನ ಬೀಜಗಳನ್ನು ಗಿಡವಾಗುವಂತೆ ಪೋಷಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಉತ್ತಮ ಪರಿಸರ ಸ್ನೇಹಿ ಅಲಂಕಾರ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರೈ, ಖಜಾಂಚಿ ಲಿಯೋ ರಫೆಲ್ ಪಿಂಟೋ, ಪ್ರಕಾಶ್ ಕನ್ಮೆಹಳ್ಳಿ, ರೋಟರಿ ಎಚ್.ಎಂ.ಕಲ್ಪನಾ, ಚಿತ್ರಕಲಾ ಶಿಕ್ಷಕ ರವಿ ಶಾನಭಾಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.