ADVERTISEMENT

ಉತ್ತರ ಕನ್ನಡ | ನಿವೃತ್ತ ಯೋಧರಿಗೆ ಕಾಂಗ್ರೆಸ್‌ನಿಂದ ಸನ್ಮಾನ

ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ರೈತರಿಗೆ ಬಿತ್ತನೆ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 12:08 IST
Last Updated 19 ಜೂನ್ 2020, 12:08 IST
ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು
ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು   

ಶಿರಸಿ: ನಿವೃತ್ತ ಯೋಧರಿಗೆ ಸನ್ಮಾನ, ಅನ್ನದಾತರಿಗೆ ಬಿತ್ತನೆ ಬೀಜ ವಿತರಿಸುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಜನ್ಮದಿನವನ್ನು ಶುಕ್ರವಾರ ಇಲ್ಲಿ ಭಿನ್ನವಾಗಿ ಆಚರಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ವಿನಾಯಕ ಭಟ್ಟ, ರಾಮಚಂದ್ರ ನಾಯ್ಕ ಮಸ್ತಾನೆ, ಮಂಜುನಾಥ ಪಟಗಾರ, ರಾಮ ಲೋಕರೆ, ಜಯವಂತ ನಾಯ್ಕ ಕಾನಗೋಡ, ಭೀಮಪ್ಪ ಗುಂಜೇಕರ್, ಗಣಪತಿ ರಾನೆ ಅವರನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಕಿಸಾನ್ ಸೆಲ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಹೆಗಡೆ ಸನ್ಮಾನಿಸಿದರು.

ಭೀಮಣ್ಣ ನಾಯ್ಕ ಮಾತನಾಡಿ, ‘ದೇಶದ ರಕ್ಷಣೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಸ್ಪಷ್ಟ ಚಿತ್ರಣ ನೀಡಬೇಕು. ದೇಶದ ಬೆನ್ನೆಲುಬಾದ ಕೃಷಿಕರು ಹಾಗೂ ಸೈನಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು’ ಎಂದರು. ಶಿವಾನಂದ ಹೆಗಡೆ ಮಾತನಾಡಿ, ‘ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಯೋಜನೆ, ವ್ಯವಸ್ಥಿತ ಮಾರುಕಟ್ಟೆ, ಗೋದಾಮುಗಳ ಕೊರತೆಯಿದೆ. ರೈತರು ದೈನಂದಿನ ವಹಿವಾಟಿಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಿಸಾನ್ ಸೆಲ್ ಬಲಗೊಳಿಸಿ, ರೈತರಲ್ಲಿ ಆತ್ಮಸ್ಥೈರ್ಯ ತುಂಬಲಾಗುವುದು’ ಎಂದರು.

ADVERTISEMENT

ಪಕ್ಷದ ಪ್ರಮುಖರಾದ ಸುಷ್ಮಾ ರೆಡ್ಡಿ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂತೋಷ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಶೆಟ್ಟಿ, ಪದಾಧಿಕಾರಿಗಳಾದ ದೀಪಕ ನಾಯ್ಕ, ಶ್ರೀಪಾದ ಹೆಗಡೆ, ಸುಮಾ ಉಗ್ರಾಣಕರ್, ವೆಂಕಟೇಶ ಹೆಗಡೆ ಉಪಸ್ಥಿತರಿದ್ದರು. ಸತೀಶ ನಾಯ್ಕ ಮಧುರವಳ್ಳಿ ನಿರೂಪಿಸಿದರು. ಜಗದೀಶ ಗೌಡ ವಂದಿಸಿದರು. 30ರಷ್ಟು ರೈತರಿಗೆ ಭತ್ತದ ಬಿತ್ತನೆ ಬೀಜ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.