ADVERTISEMENT

ಹೊನ್ನಾವರ | ಚಿಕ್ಕನಕೋಡ ಸೇವಾ ಸಹಕಾರ ಸಂಘಕ್ಕೆ ₹ 23.98 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 7:06 IST
Last Updated 13 ಸೆಪ್ಟೆಂಬರ್ 2025, 7:06 IST
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ವಾಷರ್ಿಕ ಮಹಾಸಭೆಯಲ್ಲಿ ಗ್ರಾಮದ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ವಾಷರ್ಿಕ ಮಹಾಸಭೆಯಲ್ಲಿ ಗ್ರಾಮದ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.   

ಹೊನ್ನಾವರ: ಸದಸ್ಯರ ಸಹಕಾರ ಹಾಗೂ ನಿರ್ದೇಶಕರ ಸಹಭಾಗಿತ್ವದೊಂದಿಗೆ ನಮ್ಮ ವ್ಯವಸಾಯ ಸೇವಾ ಸಹಕಾರ ಸಂಘ ತನ್ನ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದ್ದು ಕಳೆದ ಆರ್ಥಿಕ ವರ್ಷದಲ್ಲಿ ₹ 23.98 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಪಿ.ನಾಯ್ಕ ತಿಳಿಸಿದರು.

ಅವರು ಗುರುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಸದಸ್ಯರ ಸಂಖ್ಯೆ 1839ಕ್ಕೇರಿದೆ. ₹ 2.02 ಕೋಟಿ ಷೇರು ಬಂಡವಾಳ, 2.43 ಕೋಟಿ ಕಾಯ್ದಿಟ್ಟ ನಿಧಿ, 6.59 ಕೋಟಿ ಠೇವಣಿಯೊಂದಿಗೆ ಸಂಘದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಸಾಲ ವಸೂಲಾತಿಯಲ್ಲಿ ಶೇ 96 ಸಾಧನೆಯಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘಕ್ಕೆ ‘ಎ’ ದರ್ಜೆಯ ಮಾನ್ಯತೆ ಸಿಕ್ಕಿದೆ ಎಂದು ಅವರು ತಿಳಿಸಿದರು.

ADVERTISEMENT

ಉಪಾಧ್ಯಕ್ಷ ಮೋಹನ ನಾಯ್ಕ,ನಿದರ್ೇಶಕರಾದ ಕೃಷ್ಣ ಎಂ.ನಾಯ್ಕ,ಪಾಶ್ರ್ವನಾಥ ಜೈನ್, ಕೃಷ್ಣ ಎಚ್.ನಾಯ್ಕ, ನಾಗೇಶ ಡಿ.ನಾಯ್ಕ, ಗಣೇಶ ನಾಯ್ಕ, ಸೀತು ನಾಯ್ಕ, ಆಶಾ ನಾಯ್ಕ, ನಾಗೇಶ ಎಸ್.ನಾಯ್ಕ, ಗಣಪತಿ ಹಳ್ಳೇರ, ಸುಬ್ರಹ್ಮಣ್ಯ ಭಟ್ಟ, ಸಿಬ್ಬಂದಿ ಮಂಜುನಾಥ ನಾಯ್ಕ, ಜ್ಯೋತಿ ನಾಯ್ಕ, ವೆಂಕಟೇಶ ನಾಯ್ಕ, ರವಿ ನಾಯ್ಕ, ವಿವೇಕ ನಾಯ್ಕ ಹಾಗೂ ಮೋಹನ ಶೇಟ್ ಭಾಗವಹಿಸಿದ್ದರು.

ಮುಖ್ಯ ಕಾರ್ಯನಿರ್ವಾಹಕ ವಸಂತ ಎನ್.ನಾಯ್ಕ ಸ್ವಾಗತಿಸಿದರು. ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಸಭೆಗೂ ಮೊದಲು ಗುರುವಾರ ನಿಧನರಾದ ಸಹಕಾರ ಮುಖಂಡ ಪಿ.ಎಸ್.ಭಟ್ಟ ಉಪ್ಪೋಣಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.