
ಪ್ರಜಾವಾಣಿ ವಾರ್ತೆಮೊಸಳೆಯನ್ನು ನದಿಗೆ ಬಿಟ್ಟ ಸ್ಥಳೀಯರು
– ಪ್ರಜಾವಾಣಿ ಚಿತ್ರ
ದಾಂಡೇಲಿ: ನಗರದ ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಹತ್ತಿರದ ಅಲೈಡ್ ಏರಿಯಾದಲ್ಲಿ ಚರಂಡಿಯಲ್ಲಿ ಗುರುವಾರ ಬೆಳಿಗ್ಗೆ ಮೊಸಳೆ ಪತ್ತೆಯಾಗಿದೆ.
ಜನವಸತಿ ಪ್ರದೇಶದ ಸಮೀಪ ಮೊಸಳೆ ಕಾಣಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
'ಮೊಸಳೆ ಕಂಡುಬಂದಿರುವ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದರೂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ' ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರೆ ಮೊಸಳೆ ಸೆರೆಹಿಡಿದು, ಕಾಳಿ ನದಿಗೆ ಬಿಟ್ಟಿದ್ದಾರೆ.
ಅನತಿ ದೂರದಲ್ಲಿ ಕಾಳಿ ನದಿ ಹರಿಯುತ್ತಿದ್ದು ಮೊಸಳೆಗಳ ಆವಾಸ ತಾಣವಾಗಿದೆ. ವರ್ಷದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.