ADVERTISEMENT

ಮುಂಡಗೋಡ: ದೀರ್ಘಾಯುಷ್ಯ ಪೂಜೆಯಲ್ಲಿ ಪಾಲ್ಗೊಂಡ ದಲೈಲಾಮಾ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:35 IST
Last Updated 25 ಡಿಸೆಂಬರ್ 2025, 7:35 IST
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ನಂ.6ರ ಡ್ರೆಪುಂಗ್‌ ಲಾಚಿ ಬೌದ್ಧಮಂದಿರದಲ್ಲಿ ಬುಧವಾರ ನಡೆದ ವಿಶೇಷ ಡ್ರೆಪುಂಗ್‌ ಪೂಜೆಯಲ್ಲಿ ದಲೈಲಾಮಾ ಪಾಲ್ಗೊಂಡರು
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ನಂ.6ರ ಡ್ರೆಪುಂಗ್‌ ಲಾಚಿ ಬೌದ್ಧಮಂದಿರದಲ್ಲಿ ಬುಧವಾರ ನಡೆದ ವಿಶೇಷ ಡ್ರೆಪುಂಗ್‌ ಪೂಜೆಯಲ್ಲಿ ದಲೈಲಾಮಾ ಪಾಲ್ಗೊಂಡರು   

ಮುಂಡಗೋಡ: ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ನಂ.6ರ ಡ್ರೆಪುಂಗ್‌ ಲಾಚಿ ಬೌದ್ಧಮಂದಿರದಲ್ಲಿ ಬುಧವಾರ ನಡೆದ ವಿಶೇಷ ಡ್ರೆಪುಂಗ್‌ ಪೂಜೆಯಲ್ಲಿ ದಲೈಲಾಮಾ ಪಾಲ್ಗೊಂಡರು. 24ನೇ ಡ್ರೆಪುಂಗ್‌ ತ್ರಿಪಾ ಆಗಿ ಸಿಂಹಾಸನಗೊಂಡ ದಲೈಲಾಮಾ ಅವರಿಗೆ, ಧಾರ್ಮಿಕ ವಿಧಿವಿಧಾನಗಳ ಮೂಲಕ ಗೌರವಿಸಲಾಯಿತು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನೂರಾರು ಬಿಕ್ಕುಗಳು, ಬೌದ್ಧ ಅನುಯಾಯಿಗಳು ಪಾಲ್ಗೊಂಡಿದ್ದರು. ದಲೈಲಾಮಾ ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಬಿಕ್ಕುಗಳು ಸಲ್ಲಿಸಿದರು. ಡ್ರೆಪುಂಗ್‌ ಲೋಸಲಿಂಗ್‌ ಬೌದ್ಧಮಂದಿರದ ಹಿರಿಯ ಬೌದ್ಧ ಮುಖಂಡ ಟಿ ರಿನ್‌ಪೋಚೆ ಅವರು ದಲೈಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಪೂಜೆ ಸಲ್ಲಿಸಿ, ಲೋಸಲಿಂಗ್‌ ಹಾಗೂ ಗೋಮಾಂಗ್‌ ಬೌದ್ಧ ಮಂದಿರದ ವತಿಯಿಂದ ಗೌರವಿಸಿದರು.

ಗೋಮಾಂಗ್‌ ಬೌದ್ಧಮಂದಿರದಿಂದ ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದವರೆಗೆ ದಲೈಲಾಮಾ ಆಗಮನದ ಸಮಯದಲ್ಲಿ, ನೂರಾರು ಬಿಕ್ಕುಗಳು, ಟಿಬೆಟಿಯನ್ನರು ರಸ್ತೆ ಬದಿಯಲ್ಲಿ ನಿಂತು, ಧಾರ್ಮಿಕ ನಾಯಕ ದಲೈಲಾಮಾ ಅವರಿಗೆ ನಮಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.