ADVERTISEMENT

ದಾಂಡೇಲಿ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಅದ್ದೂರಿ ಚಾಲನೆ

ದಾಂಡೇಲಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:38 IST
Last Updated 14 ಫೆಬ್ರುವರಿ 2026, 6:38 IST
ದಾಂಡೇಲಿ ಡಿಎಫ್ಎ ಮೈದಾನದಲ್ಲಿ ಗುರುವಾರ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಹೊನಲು ಬೆಳಕಿನ ಪಂದ್ಯಾವಳಿಗೆ ತಹಶೀಲ್ದಾರ್ ಶೈಲೇಶ ಪರಮಾನಂದ, ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜೈನ್ ಮುಂತಾದ ಗಣ್ಯರು ಚಾಲನೆ ನೀಡಿದರು
ದಾಂಡೇಲಿ ಡಿಎಫ್ಎ ಮೈದಾನದಲ್ಲಿ ಗುರುವಾರ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಹೊನಲು ಬೆಳಕಿನ ಪಂದ್ಯಾವಳಿಗೆ ತಹಶೀಲ್ದಾರ್ ಶೈಲೇಶ ಪರಮಾನಂದ, ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜೈನ್ ಮುಂತಾದ ಗಣ್ಯರು ಚಾಲನೆ ನೀಡಿದರು   

ದಾಂಡೇಲಿ: ದಾಂಡೇಲಿ ಪ್ರೀಮಿಯರ್ ಕ್ರಿಕೆಟ್ ಲೀಗ್ ಸಮಿತಿಯ ವತಿಯಿಂದ ನಗರದ ಡಿ.ಎಫ್.ಎ ಮೈದಾನದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಸೀಸನ್ 5 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಚಾಲನೆ ನೀಡಲಾಯಿತು.

ತಹಶೀಲ್ದಾರ್‌ ಶೈಲೇಶ ಪರಮಾನಂದ ಚಾಲನೆ ನೀಡಿ ಮಾತನಾಡಿ, ಈ ಪಂದ್ಯಾವಳಿಯನ್ನು ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಯ ರೀತಿ ಆಯೋಜಿಸಲಾಗಿದೆ. ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯವರು ಕೊಟ್ಟ ಮಾತಿನಂತೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸು ತ್ತಿರುವುದರ ಜೊತೆಗೆ, ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿ ಸ್ಥಳೀಯ ಮಕ್ಕಳ ಕ್ರೀಡಾ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಬೆಳಗಾವಿ ಮ್ಯಾಗ್ನೆಟಾ ಐಸ್ ಕ್ರೀಮ್ ಕಂಪನಿ ಮಾಲೀಕ ದಿಗ್ವಿಜಯ ಸಿದ್ನಾಳ, ಪೌರಾಯುಕ್ತ ವಿವೇಕ್ ಬನ್ನೆ , ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾತನಾಡಿ, ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ರೀತಿಯಲ್ಲಿ ಆಯೋಜಿಸಲಾಗಿದೆ. ಇದು ಪ್ರತಿಭೆಗಳ ಉಜ್ವಲ ಬದುಕಿಗೆ ಪ್ರೇರಣೆಯಾಗಿದೆ. ದಾಂಡೇಲಿಯ ಕ್ರೀಡಾ ಪ್ರತಿಭೆಗಳ ಭವಿಷ್ಯದ ಉನ್ನತಿಗೆ ಈ ಪಂದ್ಯಾವಳಿ ಮುನ್ನುಡಿಯಾಗಲಿ ಇಂತಹ ಪಂದ್ಯಾವಳಿ ನಿರಂತರವಾಗಿ ನಡೆಯುವಂತಾಗಲಿ ಎಂದರು.

ADVERTISEMENT

ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷ ಅನಿಲ್ ಪಾಟ್ನೇಕರ ಐದನೇ ಆವೃತ್ತಿಯವರೆಗೆ ಯಶಸ್ವಿಯಾಗಿ ಸಾಗಿ ಬಂದಿದೆ. ಈ ಅಭೂತಪೂರ್ವ ಯಶಸ್ಸಿಗೆ ದಾಂಡೇಲಿ ಜನತೆ, ಪ್ರಾಯೋಜಕರು, ದಾನಿಗಳು, ಕ್ರೀಡಾ ಪ್ರೇಮಿಗಳ ತುಂಬು ಹೃದಯದ ಸಹಕಾರವೇ ಕಾರಣವಾಗಿದೆ ಎಂದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ್ ಶರ್ಮಾ, ಪಿಎಸ್ಐ ಅಮೀನ್ ಅತ್ತಾರ, ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಲದೀಪ್ ಸಿಂಗ್ ರಜಪೂತ್ ಹಾಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳು ಮತ್ತು 8 ಪ್ರಾಂಚೈಸಿ ತಂಡಗಳ ಮಾಲೀಕರು ಇದ್ದರು.

ಉಪಾಧ್ಯಕ್ಷ ಇಮಾಮ್ ಸರ್ವರ್ ಸ್ವಾಗತಿಸಿದರು. ಕೋಶಾಧಿಕಾರಿ ಸಚಿನ್ ಕಾಮತ್ ವಂದಿಸಿದರು. ಸುರೇಶ ಕಾಮತ ನಿರೂಪಿಸಿದರು. ದಾಂಡೇಲಿ ಪ್ರೆಸ್ ವಾರಿಯರ್ಸ್ ಮತ್ತು ದಾಂಡೇಲಿ ಪ್ರೀಮಿಯರ್ ಲೀಗ್ ಕಮಿಟಿ ತಂಡಗಳ ನಡುವೆ ಹೊನಲು ಬೆಳಕಿನಲ್ಲಿ ಪ್ರದರ್ಶನ ಪಂದ್ಯ ನಡೆಯಿತು. ದಾಂಡೇಲಿ ಪ್ರೆಸ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.