
ಪ್ರಜಾವಾಣಿ ವಾರ್ತೆ
ಯಲ್ಲಾಪುರ: ದತ್ತ ಜಯಂತಿ ಹಿನ್ನೆಲೆಯಲ್ಲಿ ದತ್ತ ಮಂದಿರ ಸಮಿತಿ ಪ್ರಮುಖರು ಸೋಮವಾರ ಪಟ್ಟಣದ ವಿವಿಧೆಡೆ ದತ್ತ ಭಿಕ್ಷೆ ಕೈಗೊಂಡರು.
ಪಟ್ಟಣದ ಕೋರ್ಟವಾಡಾ, ಟಿಳಕ ಚೌಕ್, ಹಾದಿಭಾವಿ ಗಲ್ಲಿಯಲ್ಲಿ ಮನೆ ಮನೆಗೆ ತೆರಳಿ ಅಕ್ಕಿ, ಕಾಯಿ, ಬೆಲ್ಲ, ಬೆಳೆಯಂತಹ ಸುವಸ್ತು ಹಾಗೂ ಕಾಣಿಕೆಯನ್ನು ದತ್ತ ಭಿಕ್ಷೆಯಾಗಿ ಸ್ವೀಕರಿಸಿದರು.
ಪ್ರಮುಖರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಸಾದ ಹೆಗಡೆ, ನಾಗರಾಜ ಮದ್ಗುಣಿ, ಪ್ರಶಾಂತ ಹೆಗಡೆ, ರಮೇಶ ಹೆಗಡೆ, ರವಿ ದೇವಾಡಿಗ, ನಾರಾಯಣ ನಾಯಕ, ಕೆ.ಟಿ.ಭಟ್ಟ, ನಾಗಾರ್ಜುನ ಬದ್ದಿ, ಚಂದನ ನಾಯ್ಕ, ಕೇಶವ ಗಾಂವಕರ್, ಸುದೀಪ ನಾಯ್ಕ, ಪ್ರಶಾಂತ ಭಜಂತ್ರಿ, ಕಿರಣ ಭೋವಿವಡ್ಡರ, ಪ್ರಜ್ವಲ್ ಮಂಡಗೊಡ್ಲಿ, ವಿಶ್ವನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.