ADVERTISEMENT

ಕಾಳಿ ನದಿಯ ಸೇತುವೆ ಮೇಲೆ ಬೆಳೆದ ಗಿಡ ತೆರವು ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:32 IST
Last Updated 12 ಫೆಬ್ರುವರಿ 2026, 6:32 IST
ದಾಂಡೇಲಿ– ಕುಳಗಿ ರಸ್ತೆಯ ಕಾಳಿ ನದಿ ಸೇತುವೆ ಇಕ್ಕೆಲಗಳಲ್ಲಿ ಗಿಡಗಂಟಿಗಳ ಬೆಳೆದಿವೆ
ದಾಂಡೇಲಿ– ಕುಳಗಿ ರಸ್ತೆಯ ಕಾಳಿ ನದಿ ಸೇತುವೆ ಇಕ್ಕೆಲಗಳಲ್ಲಿ ಗಿಡಗಂಟಿಗಳ ಬೆಳೆದಿವೆ   

ದಾಂಡೇಲಿ: ‘ಕಾಳಿ ನದಿಯ ಕುಳಗಿ ಸೇತುವೆ ಇಕ್ಕೆಲಗಳಲ್ಲಿ ಬೆಳೆದ ಗಿಡ ಕಂಟಿಗಳನ್ನು ಲೋಕೋಪಯೋಗಿ ಇಲಾಖೆಯವರು ತೆರವುಗೊಳಿಸಬೇಕು. ಈ ಗಿಡಗಳಿಂದ ಸೇತುವೆ ಬೇಗ ಹಾಳಾಗುತ್ತದೆ. ಗಿಡಗಳು ಬೆಳೆದು ಸೇತುವೆ ಮೇಲ್ಭಾಗಕ್ಕೆ ಚಾಚಿಕೊಳ್ಳುತ್ತಿರುವುದರಿಂದ ಸಂಚಾರಕ್ಕೂ ಅಡ್ಡಿಯಾಗುತ್ತಿದೆ’ ಎಂದು ಕೋಗಿಲಬನದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ ನಾಯ್ಕ ಒತ್ತಾಯಿಸಿದ್ದಾರೆ.

‘ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಗಿಡ ತೆಗೆಯಲು ಹಲವು ಬಾರಿ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 50 ವರ್ಷಗಳಿಂದ ಹಿಂದೆ ನಿರ್ಮಿಸಿದ ಈ ಸೇತುವೆಯ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದರು.

‘ಒಂದೊಂದು ಪೊದೆಯಲ್ಲಿ ದೊಡ್ಡ ಬಡ್ಡೆ ಬೆಳೆದಿದ್ದು, ಅದನ್ನು ಸಂಪೂರ್ಣವಾಗಿ ತೆಗೆಯದ ಕಾರಣ ಗಿಡಗಳು ನಾಲ್ಕೈದು ತಿಂಗಳೊಳಗೆ ಬೆಳೆದು ನಿಲ್ಲುತ್ತವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.