ADVERTISEMENT

ಕಾರವಾರ: ಅಲೆಗಳ ಅಬ್ಬರದಿಂದಾಗಿ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 7:26 IST
Last Updated 18 ಆಗಸ್ಟ್ 2025, 7:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಕಾರವಾರ: ಅಲೆಗಳ ಅಬ್ಬರದಿಂದಾಗಿ ತಾಲ್ಲೂಕಿನ ದೇವಬಾಗ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ಮರಿಯನ್ನು ಇಲ್ಲಿನ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಿಬ್ಬಂದಿ ಸೋಮವಾರ ಪುನಃ ಸಮುದ್ರಕ್ಕ ಬಿಟ್ಟು, ರಕ್ಷಿಸಿದರು.

ADVERTISEMENT

ಚಂಡಮಾರುತದ ಕಾರಣದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಅಬ್ಬರದ ಅಲೆಗಳಿಗೆ ಸಿಲುಕಿದ ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ತಳಿಯ ಡಾಲ್ಫಿನ್ ಮರಿ ರೆಸಾರ್ಟ್ ಸಮೀಪದ ಕಡಲತೀರಕ್ಕೆ ಬಂದು ಬಿದ್ದಿತ್ತು. ನೀರಿಗೆ ಸಾಗಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಿಬ್ಬಂದಿ ಗಮನಕ್ಕೆ ತಂದಿದ್ದರು.

ಸಿಬ್ಬಂದಿ ನೀಲೇಶ್, ಸುನೀಲ್ ಮತ್ತು ಸಂತೋಷ್ ಡಾಲ್ಫಿನ್ ಮರಿಯನ್ನು ಪುನಃ ಸಮುದ್ರಕ್ಕೆ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.