ADVERTISEMENT

ಶಿರಸಿ: ಸ್ಕೇಟಿಂಗ್ ಮಾಡುತ್ತ ಗ್ರಹಣ ವೀಕ್ಷಣೆ 

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 7:44 IST
Last Updated 26 ಡಿಸೆಂಬರ್ 2019, 7:44 IST
ಸ್ಕೇಟಿಂಗ್ ಮಾಡುತ್ತ ಗ್ರಹಣ ವೀಕ್ಷಿಸುತ್ತಿರುವ ಮಕ್ಕಳು –ಪ್ರಜಾವಾಣಿ ಚಿತ್ರ
ಸ್ಕೇಟಿಂಗ್ ಮಾಡುತ್ತ ಗ್ರಹಣ ವೀಕ್ಷಿಸುತ್ತಿರುವ ಮಕ್ಕಳು –ಪ್ರಜಾವಾಣಿ ಚಿತ್ರ   

ಶಿರಸಿ: ನಭೋ ಮಂಡಲದಲ್ಲಿ ನೆರಳು ಬೆಳಕಿನ ಆಟ ನಡೆಯುತ್ತಿದ್ದರೆ, ಶಿರಸಿಯ ಅದ್ವೈತ ಸ್ಕೇಟಿಂಗ್ ರಿಂಕ್ ನಲ್ಲಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರು. ಕೇವಲ ಸ್ಕೇಟಿಂಗ್ ಮಾಡುವುದೇ ವಿಶೇಷವಾಗಿರಲಿಲ್ಲ. ಅವರೆಲ್ಲ ಸ್ಕೇಟಿಂಗ್ ಮಾಡುತ್ತ ಕಂಕಣ‌ ಸೂರ್ಯ ಗ್ರಹಣದ ವಿಸ್ಮಯ ಕ್ಷಣಗಳನ್ನು ನೋಡಿ ಚಕಿತರಾದರು.

ಅದ್ವೈತ ಸ್ಕೇಟರ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಸ್ಕೇಟಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೆಳಿಗ್ಗೆ 8 ಗಂಟೆಯಿಂದ ಅದ್ವೈತ ಸ್ಕೇಟಿಂಗ್ ರಿಂಕ್ ನಲ್ಲಿ ಗ್ರಹಣ ವಿಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಬೃಹತ್ ಎಲ್ ಸಿಡಿ ಪರದೆಯ ಮೇಲೆ ಗ್ರಹಣದ ವೀಕ್ಷಣೆ, ಕೃತಕವಾಗಿ‌ ರಚಿಸಿದ ಪಿನ್ ಹೋಲ್ ಕ್ಯಾಮೆರಾದಿಂದ ಗ್ರಹಣ ವೀಕ್ಷಣೆ ಹಾಗೂ ಸೋಲಾರ್ ಕನ್ನಡಕದಿಂದ ಕಂಕಣ ಸೂರ್ಯ ಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿದರು.

ADVERTISEMENT

ವಿದ್ಯಾರ್ಥಿಗಳು ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡು ಸ್ಕೇಟಿಂಗ್ ಮಾಡುತ್ತ ಸೋಲಾರ್ ಕನ್ನಡಕದಿಂದ ಗ್ರಹಣವನ್ನು ವೀಕ್ಷಿಸಿದರು.

ಗ್ರಹಣಗಳ ಬಗ್ಗೆ ಸಾರ್ವಜನಿಕವಾಗಿರುವ ನಂಬಿಕೆ‌, ಮೂಢ ನಂಬಿಕೆಯ ಬಗ್ಗೆ ಹಾಗೂ ಸೂರ್ಯ ಗ್ರಹಣದ ಬಗ್ಗೆ ವಿಜ್ಞಾನ ಶಿಕ್ಷಕಿ ರೋಹಿಣಿ ಹೆಗಡೆ ಮಾಹಿತಿ ‌ನೀಡಿದರು.

ಈ‌ ಸಂಧರ್ಭದಲ್ಲಿ ಅದ್ವೈತ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷ ಕಿರಣಕುಮಾರ, ಪಯಣ ಪ್ರವಾಸೋದ್ಯಮ ಸಂಸ್ಥೆಯ ಕಾರ್ಯದರ್ಶಿ ಪರಮೇಶ್ವರ, ಸ್ಕೇಟಿಂಗ್ ತರಬೇತುದಾರರಾದ ಸುನೀಲ್ ಕುಮಾರ, ಪಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.