ADVERTISEMENT

ಕಬ್ಬಿಣದ ಅದಿರು ನಾಪತ್ತೆ ಪ್ರಕರಣ: ಸೈಲ್ ಮನೆಯಿಂದ ದಾಖಲೆ ವಶಕ್ಕೆ ಪಡೆದ ಇ.ಡಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 20:35 IST
Last Updated 14 ಆಗಸ್ಟ್ 2025, 20:35 IST
ಕಾರವಾರದಲ್ಲಿ ಶಾಸಕ ಸತೀಶ ಸೈಲ್ ಮನೆಯಿಂದ ದಾಖಲೆಗಳಿದ್ದ ಪೆಟ್ಟಿಗೆಯನ್ನು ಇ.ಡಿ ಅಧಿಕಾರಿಗಳು ಹೊರತಂದಿರುವುದು
ಕಾರವಾರದಲ್ಲಿ ಶಾಸಕ ಸತೀಶ ಸೈಲ್ ಮನೆಯಿಂದ ದಾಖಲೆಗಳಿದ್ದ ಪೆಟ್ಟಿಗೆಯನ್ನು ಇ.ಡಿ ಅಧಿಕಾರಿಗಳು ಹೊರತಂದಿರುವುದು   

ಕಾರವಾರ: ಇಲ್ಲಿನ ಶಾಸಕ ಸತೀಶ ಸೈಲ್ ನಿವಾಸದಲ್ಲಿ ಗುರುವಾರ ನಸುಕಿನ 4 ಗಂಟೆಯವರೆಗೂ ಪರಿಶೀಲನೆ ನಡೆಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ತಂಡವು ಹಲವು ದಾಖಲೆಗಳನ್ನು ವಶಕ್ಕೆ ಪಡೆಯಿತು.

‘24 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಸಕರ ಮನೆಯಿಂದ ಗುರುವಾರ ನಸುಕಿನವರೆಗೆ ಹಂತಹಂತವಾಗಿ ನಿರ್ಗಮಿಸಿದರು. ದಾಖಲೆಗಳನ್ನು 4 ಪೆಟ್ಟಿಗೆಗಳಲ್ಲಿ ಒಯ್ದರು’ ಎಂದು ಮೂಲಗಳು ತಿಳಿಸಿವೆ.

‘ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿ ಆಗಿರುವ ಶಾಸಕ ಸತೀಶ ಸೈಲ್ ಈ ಹಿಂದೆ ನಡೆಸಿದ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಪರಿಶೀಲಿಸಿರಬಹುದು. ಸೈಲ್ ಮನೆಯಲ್ಲಿ ಇರದ ಕಾರಣಕ್ಕೆ ಅವರನ್ನು ಕರೆಯಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದರು. ಇದಕ್ಕಾಗಿ ಅವರ ಅಂಗರಕ್ಷಕ, ಆಪ್ತ ವಲಯದ ಒಂದಿಬ್ಬರನ್ನು ವಿಚಾರಣೆ ನಡೆಸಿದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.