ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ 8 ಪ್ರವಾಸಿಗರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:14 IST
Last Updated 4 ಜನವರಿ 2026, 8:14 IST
ಗೋಕರ್ಣದ ಮೇನ್ ಬೀಚಿನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದು ನಾಲ್ವರು ಕೊಪ್ಪಳ ಮೂಲದ ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದರು
ಗೋಕರ್ಣದ ಮೇನ್ ಬೀಚಿನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದು ನಾಲ್ವರು ಕೊಪ್ಪಳ ಮೂಲದ ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದರು   

ಗೋಕರ್ಣ: ಇಲ್ಲಿಯ ಮೇನ್ ಬೀಚಿನ ಸಮುದ್ರದಲ್ಲಿ ಈಜಾಡುವ ವೇಳೆ ಅಲೆಯ ಸುಳಿಗೆ ಸಿಲುಕಿ, ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ 8 ಪ್ರವಾಸಿಗರನ್ನು ಶನಿವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.

ಮೊದಲನೆ ಪ್ರಕರಣದಲ್ಲಿ ಕೊಪ್ಪಳ ಮೂಲದ 12 ಜನ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಅಭಿಷೇಕ್ ಹನುಮಂತ ವಳಗೇರಿ (21), ಹುಸೇನ್ ಸಾಬ್ (18), ಶಿವರಾಜ್ ಮರಿಯಪ್ಪ ಯಾಟಿ (18) ಮತ್ತು ಮುತ್ತುರಾಜ್ ಮೈಲಾರಪ್ಪ ಕೊಡಲಗಿ (24) ಎಂಬ ನಾಲ್ಕು ಜನ ಪ್ರವಾಸಿಗರನ್ನು ರಕ್ಷಿಸಲಾಯಿತು.

ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದ 17 ಜನ ಗೋಕರ್ಣಕ್ಕೆ ಬಂದಿದ್ದರು. ಅವಿನಾಶ್ ತಿಪ್ಪೇಸ್ವಾಮಿ (20), ರಘು ತಿಪ್ಪೇಸ್ವಾಮಿ ಚಳ್ಳಿಕೆರೆ (21), ಅಜಯ್ ಗಂಗಪ್ಪ ಚಳ್ಳಿಕೆರೆ (26) ಮತ್ತು ಅಶ್ವತ್ (14) ಎಂಬ ನಾಲ್ವರು ಸುಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಅವರನ್ನು ರಕ್ಷಿಸಿದರು.

ADVERTISEMENT

ಎರಡೂ ಪ್ರಕರಣದಲ್ಲಿ ಜೀವ ಉಳಿಸಿದ ರಕ್ಷಣಾ ಸಿಬ್ಬಂದಿ: ಮೋಹನ ಅಂಬಿಗ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕಮಲಾಕರ್ ಹೊಸ್ಕಟ್ಟಾ, ದೀಪಕ್ ಗೌಡ, ಚಿದಾನಂದ ಲಕ್ಕುಮನೆ.

ಗೋಕರ್ಣದ ಮೇನ್ ಬೀಚಿನಲ್ಲಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದು ರಕ್ಷಿಸಲ್ಪಟ್ಟ ಚಿತ್ರದುರ್ಗ ಮೂಲದ ನಾಲ್ವರು ಪ್ರವಾಸಿಗರು  ಮತ್ತು ರಕ್ಷಿಸಿದ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.