ADVERTISEMENT

ಕಾರವಾರದಲ್ಲಿ 24ಕ್ಕೂ ಅಧಿಕ ತಾಸು ವಿದ್ಯುತ್ ಸ್ಥಗಿತ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 10:53 IST
Last Updated 13 ಜೂನ್ 2019, 10:53 IST
   

ಕಾರವಾರ: ನಗರದ ಹಲವಾರು ಕಡೆಬುಧವಾರ ಬೆಳಿಗ್ಗೆ ಸ್ಥಗಿತವಾದ ವಿದ್ಯುತ್, ಗುರುವಾರ ಮಧ್ಯಾಹ್ನವಾದರೂ ಬಂದಿಲ್ಲ. ಇದರಿಂದಾಗಿ ಹೆಸ್ಕಾಂ, ಸಾರ್ವಜನಿಕರು ಹಾಗೂ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.

ಬುಧವಾರ ಮಧ್ಯಾಹ್ನ ಬೀಸಿದ ರಭಸದ ಗಾಳಿಗೆ ಬಾಂಡಿಶಿಟ್ಟಾ ಬಳಿ 33 ಕೆ.ವಿ ವಿದ್ಯುತ್ ತಂತಿಯ ಎರಡು ಕಂಬಗಳು ಮುರಿದು ಬಿದ್ದಿವೆ. ಹೆಸ್ಕಾಂ ಸಿಬ್ಬಂದಿ ಅದರ ದುರಸ್ತಿ ಮಾಡುತ್ತಿದ್ದಾರೆ. ಆದರೆ, ವಿದ್ಯುತ್ ಕೈಕೊಟ್ಟಿರುವ ಬಗ್ಗೆ ಹೆಸ್ಕಾಂಕಚೇರಿಗೆ ಸಾರ್ವಜನಿಕರು ಕರೆ ಮಾಡಿದರೂ ಯಾರೂ ಉತ್ತರಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಸ್ ಕ್ರೀಂ ಉದ್ಯಮಕ್ಕೆ ನಷ್ಟ

ನಗರದ 'ನ್ಯಾಚುರಲ್ ಐಸ್ ಕ್ರೀಂ' ಫ್ಯಾಕ್ಟರಿಯಲ್ಲಿ ಸುಮಾರು ಎರಡು ಲಕ್ಷ ಮೌಲ್ಯದಐಸ್ ಕ್ರೀಂ ವಿದ್ಯುತ್ ಇಲ್ಲದೇ ಹಾಳಾಗಿದೆ. ಕೋಡಿಬಾಗದಲ್ಲಿರುವ ಫ್ಯಾಕ್ಟರಿಯ ಮಳಿಗೆಯೊಂದರಲ್ಲೇ ಸುಮಾರು ₹50 ಸಾವಿರ ಮೌಲ್ಯದ ವಿವಿಧ ಐಸ್ ಕ್ರೀಂ ಪ್ಯಾಕ್ ಗಳು ಹಾಳಾಗಿವೆ.

ADVERTISEMENT

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸ್ಥೆಯ ಮಾಲೀಕ ಚಂದ್ರಕಾಂತ ನಾಯ್ಕ, 'ಸಮಸ್ಯೆಯ ಬಗ್ಗೆ ಗ್ರಾಹಕರಿಗೆ ಹೆಸ್ಕಾಂ ಮಾಹಿತಿ ನೀಡಿದ್ದರೆ ಅಥವಾ ಇಷ್ಟು ಗಂಟೆಗೆ ವಿದ್ಯುತ್ ಪೂರೈಕೆ ಆಗಲಿದೆ ಎಂದು ಮಾಹಿತಿಯನ್ನಾದರೂ ನೀಡಿದ್ದರೆ ಬದಲಿ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳಬಹುದಾಗಿತ್ತು. ಈ ಬಗ್ಗೆ ಮಾಹಿತಿಗಾಗಿ ಕರೆ ಮಾಡಿದರೂ ಸಹ ಕರೆ ರಿಸೀವ್ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ನಿರ್ಲಕ್ಷ್ಯತನದಿಂದಾಗಿ ಐಸ್ ಕ್ರೀಂ ಹಾಳಾಗಿದೆ. ಅದನ್ನು ಈಗ ನದಿಗೆ ಅಥವಾ ಸಮುದ್ರಕ್ಕೆ ಎಸೆಯುವಂತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಹುಭಾಗದಲ್ಲಿ ವಿದ್ಯುತ್ ಪೂರೈಕೆಯಿಲ್ಲದೇ 24ಕ್ಕಿಂತಲೂಹೆಚ್ಚು ತಾಸುಗಳಾಗಿವೆ. ಇಷ್ಟು ಹೊತ್ತು ವಿದ್ಯುತ್ ಉತ್ಪಾದನೆಗೆ ಜನರೇಟರ್ ವ್ಯವಸ್ಥೆ ಬಹಳ ಕಡಿಮೆ ಉದ್ಯಮಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.