ADVERTISEMENT

ಶತಾಯುಷಿ ಜನ್ಮದಿನಕ್ಕೆ ನೇತ್ರದಾನ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 13:52 IST
Last Updated 21 ಜನವರಿ 2020, 13:52 IST
ದೇವಮ್ಮ ಹೆಗಡೆ
ದೇವಮ್ಮ ಹೆಗಡೆ   

ಜೊಯಿಡಾ: ‘ಅಬ್ಬೆ’ ಎಂದೇ ಪರಿಚಿತವಾಗಿರುವ ತಾಲ್ಲೂಕಿನ ಛಾಪಖಂಡದ ಶತಾಯುಷಿ ದೇವಮ್ಮ ಹೆಗಡೆ ಅವರ ನೂರರ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅವರ ಕುಟುಂಬದ ಸದಸ್ಯರು, ಒಡನಾಡಿಗಳು ಸೇರಿ 15ಕ್ಕೂ ಹೆಚ್ಚು ಜನರು ನೇತ್ರದಾನ ಸಂಕಲ್ಪ ಮಾಡಲಿದ್ದಾರೆ. ಜ.22ರಂದು ಪೊಟೋಲಿಯ ಕಾಡುಮನೆ ಪಕ್ಕದ ಹಕ್ಕಿಮನೆಯಲ್ಲಿ ನೇತ್ರದಾನ ಜಾಗೃತಿ ಉಪನ್ಯಾಸ ಕೂಡ ನಡೆಯಲಿದೆ.

’ನೂರು ವರ್ಷ ಆಯಸ್ಸಿನ ಅಬ್ಬೆಯ ಕಣ್ಣಿನ ದೃಷ್ಟಿ ಇನ್ನೂ ಸ್ಪಷ್ಟವಾಗಿದೆ. ದೈನಂದಿನ ಕೆಲಸವನ್ನು ಸ್ವತಂತ್ರವಾಗಿ ಮಾಡಿಕೊಳ್ಳುವಷ್ಟು ಗಟ್ಟಿಮುಟ್ಟಾಗಿದ್ದಾರೆ. 12 ವರ್ಷ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಅವರು, ತಮ್ಮ ಇಡೀ ಜೀವನವನ್ನು ಸೇವೆಗೆ ಮೀಸಲಿಟ್ಟವರು. ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದವರು. ಅವರ ಬಗ್ಗೆ ಇಡೀ ಕುಟುಂಬಕ್ಕೆ ಹೆಮ್ಮೆಯಿದೆ’ ಎನ್ನುತ್ತಾರೆ ಕುಟುಂಬದ ಸದಸ್ಯ ನರಸಿಂಹ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT