ADVERTISEMENT

ಭೂಮಿ ಹದಗೊಳಿಸುವ ಕಾಯಕದಲ್ಲಿ ರೈತ

ಅಂಕೋಲಾ: 4,700 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ

ಮಂಜುನಾಥ ಇಟಗಿ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
ಅಂಕೋಲಾ ಸಮೀಪದ ಹೊಲವೊಂದರಲ್ಲಿ ರೈತರು ಭೂಮಿ ಹದಗೊಳಿಸುತ್ತಿರುವುದು
ಅಂಕೋಲಾ ಸಮೀಪದ ಹೊಲವೊಂದರಲ್ಲಿ ರೈತರು ಭೂಮಿ ಹದಗೊಳಿಸುತ್ತಿರುವುದು   

ಅಂಕೋಲಾ: ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು,ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರೈತರುನೇಗಿಲುಹಿಡಿದು ಕೃಷಿ ಭೂಮಿಯನ್ನು ಹದಗೊಳಿಸುವ ಕಾಯಕದಲ್ಲಿ ನಿರತನಾಗಿದ್ದಾರೆ.

ತಾಲ್ಲೂಕಿನ 7,000 ಹೆಕ್ಟೇರ್ ಕೃಷಿಭೂಮಿಯಲ್ಲಿ 4,700 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯಿದೆ. ಈಗ ಭೂಮಿ ಹದಗೊಳಿಸುವ ಕೆಲಸ ಭರದಿಂದ ಸಾಗಿದೆ. ಈಗಲೋ ಆಗಲೋ ಬರುವ ಮಳೆಯು ಕೃಷಿಭೂಮಿಯನ್ನು ತಂಪಾಗಿಸಿದ್ದು, ಅದರಲ್ಲೇ ಉಳುಮೆ ಮಾಡಲಾಗುತ್ತಿದೆ.

ಬಿತ್ತನೆ ಬೀಜ:ಕೃಷಿ ಇಲಾಖೆಯತಾಲ್ಲೂಕು ಕಚೇರಿಯಲ್ಲಿ ಮೇ 15ಕ್ಕೆ ಬಿತ್ತನೆ ಬೀಜ ದಾಸ್ತಾನು ಇಡಲಾಗಿದೆ. ಉಳಿದಂತೆತಾಲ್ಲೂಕಿನ ನಾಲ್ಕು ಹೋಬಳಿಗಳಾದಬಳಲೆ, ಬೆಲೆಕೇರಿ, ಬಾಸ್ಗೋಡ, ಅಂಕೋಲಾ ರೈತ ಸಂಪರ್ಕ ಕೇಂದ್ರದಲ್ಲೂಬಿತ್ತನೆ ಬೀಜ ಲಭ್ಯವಿದೆ. ಮಳೆಯ ಅಭಾವದಿಂದಾಗಿ ಈ ವರ್ಷ ಬಿತ್ತನೆ ಬೀಜಕ್ಕೆ ಕಳೆದ ವರ್ಷಕ್ಕಿಂತ ಕಡಿಮೆ ಬೇಡಿಕೆಯಿದೆ.

ADVERTISEMENT

ಭತ್ತದ ಅಧಿಕ ಇಳುವರಿ ತಳಿಗಳಾದ ‘ಜಯಾ’ 800 ಕ್ವಿಂಟಲ್, ‘ಎಂಟಿವಿ 1001’ 60 ಕ್ವಿಂಟಲ್, ಹೈಬ್ರಿಡ್ ತಳಿಗಳಾದ ‘ಪಿಎಸ್‍ಸಿ’ 110 ಕ್ವಿಂಟಲ್, ‘ಯುಎನ್‍ಎಲ್’ 44 ಕ್ವಿಂಟಲ್, ‘ಎಂ.ಜೆ’ 10 ಕ್ವಿಂಟಲ್ ಬೀಜಗಳು ಕೃಷಿ ಇಲಾಖೆಯಲ್ಲಿ ದಾಸ್ತಾನಿದೆ. ಈಗಾಗಲೇ ಶೇ 60ರಷ್ಟು ರೈತರು ಶೇ 33ರ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಂಡಿದ್ದಾರೆ.

ಗೊಬ್ಬರ:ಹಸಿರೆಲೆ ಗೊಬ್ಬರದ ಬೀಜ ಡಯೆಂಚಾ ಮತ್ತು ಸಣ್ಣೆಲೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಅಲ್ಲದೇ ಭತ್ತದ ಬೆಳೆಗೆ ಲಘು ಪೋಷಕಾಂಶವಾದ ಜಿಂಕ್ ಸಲ್ಫೇಟ್ ಬೋರೆಕ್ಸ್ ಅನ್ನು ರೈತರು ಕೃಷಿ ಇಲಾಖೆಯಿಂದ ಪಡೆದಿರುತ್ತಾರೆ. ಈ ವರ್ಷ ಮಳೆಯು ಕಣ್ಣಾಮುಚ್ಚಾಲೆ ರೈತರ ಮೇಲೆ ಬರೆ ಎಳೆಯದಂತಾಗಿದೆ. ಮುಂದಿನ ದಿನದಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು, ಒಳ್ಳೆಯ ಫಸಲು ಕೈ ಸೇರುವ ನಿರೀಕ್ಷೆ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.