ADVERTISEMENT

ಭಟ್ಕಳ: ಮತ್ತೊಬ್ಬ ಮೀನುಗಾರನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 18:38 IST
Last Updated 2 ಆಗಸ್ಟ್ 2025, 18:38 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಜುಲೈ 30ರಂದು ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಕಣ್ಮರೆಯಾದ ನಾಲ್ವರ ಮೀನುಗಾರರ ಪೈಕಿ ನಿಶ್ಚಿತ್ ಮೊಗೇರ ಎಂಬುವರ ಶವ ಶನಿವಾರ ಕುಂದಾಪುರದ ಮರವಂತೆ ಸಮುದ್ರದಲ್ಲಿ ಪತ್ತೆಯಾಗಿದೆ. 

ರಾಮಕೃಷ್ಣ ಮೊಗೇರ ಎಂಬುವರ ಶವ, ಘಟನೆ ನಡೆದ ಮರುದಿನವೇ ಪತ್ತೆಯಾಗಿತ್ತು. ಈವರೆಗೆ ಇಬ್ಬರ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ.

ADVERTISEMENT

ರಾಜ್ಯ ಮೀನುಗಾರ ಇಲಾಖೆ ನಿರ್ದೇಶಕ ದಿನೇಶ ಕಲ್ಲೇರ ಹಗೂ ಭಟ್ಕಳ ಉಪವಿಭಾಗಾಧಿಕಾರಿ ಕೆ.ವಿ ಕಾವ್ಯರಾಣಿ ಅಳ್ವೇಕೋಡಿ ಸಮುದ್ರ ತೀರಕ್ಕೆ ಭೇಟಿ ನೀಡಿ ಮೀನುಗಾರರ ಮುಖಂಡರ ಜೊತೆ ಸಮಾಲೋಚಿಸಿದರು. ಮೀನುಗಾರರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.